ಕಲಾವಿದರ ಕ್ಯಾಲೆಂಡರ್ ಬಿಡುಗಡೆ

7

ಕಲಾವಿದರ ಕ್ಯಾಲೆಂಡರ್ ಬಿಡುಗಡೆ

Published:
Updated:
ಕಲಾವಿದರ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು: ಶಿಲ್ಪದಲ್ಲಿ ಕೆತ್ತಿದಂತಿರುವ ಗಣಪತಿ, ನೀರನ್ನು ಸುರಿಯುತ್ತಿರುವ ಮಹಿಳೆ, ಶೃಂಗಾರದ ರಸಗಳಿಗೆಯಲ್ಲಿ ಮೈಮರೆತಿರುವ ಯುವತಿ,  ಸ್ನಿಗ್ಧತೆಯನ್ನು ತೋರುತ್ತಿರುವ ಬುದ್ಧ, ಕೃಷ್ಣನ ಕೊಳಲವಾದನವನ್ನು ಆಲಿಸುತ್ತಾ ಮೈಮರೆತಿರುವ ರಾಧೆ–ಹೀಗೆ   ಅನೇಕ ಸುಂದರ ಕಲಾಕೃತಿ­ಗಳನ್ನು ಬಳಸಿ ತಯಾರಿಸಿರುವ  ಕ್ಯಾಲೆಂಡರ್‌ ಅನ್ನು ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ‘ಮಾಸ್ಟರ್ ಕಿಚನ್ ಅಪ್ಲಯನ್ಸಸ್‌’ ಹೊರ ತಂದಿದೆ.ನಗರದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬನ್ಸಾಲಿ, ‘ಪ್ರತಿಭಾವಂತ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕ್ಯಾಲೆಂಡರ್‌ ಹೊರತಂದಿದ್ದೇವೆ’ ಎಂದರು.‘ಹಲವಾರು ವರ್ಷಗಳ ಪರಿಶ್ರಮ­ದಿಂದ ಚಿತ್ರಕಲೆಯನ್ನು ಕಲಿತಿರುವ ಹಲವಾರು ಕಲಾವಿದರುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ದೊರೆತಿರುವುದಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಜೀವನ ನಿರ್ವಹಣೆಯ ಕಷ್ಟ ಹಲವರನ್ನು ಚಿತ್ರಕಲೆಯನ್ನು ಬಿಟ್ಟು ಬೇರೆ ಬೇರೆ ಉದ್ಯೋಗ ಅರಸಿಕೊಳ್ಳುವ ಅನಿವಾರ್ಯತೆಗೆ ದೂಡುತ್ತದೆ’ ಎಂದು ಅವರು ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry