ಕಲಾವಿದೆ ಪ್ರೇಮಾಸ್ವಾಮಿ ನಿಧನ

7

ಕಲಾವಿದೆ ಪ್ರೇಮಾಸ್ವಾಮಿ ನಿಧನ

Published:
Updated:

ಬೆಂಗಳೂರು: ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಪ್ರೇಮಾಸ್ವಾಮಿ (64) ಬೆಂಗಳೂರಿನಲ್ಲಿ ಸೋಮವಾರ ನಿಧನರಾದರು. ಅವರು ಪತಿ, ಖ್ಯಾತ ಮೃದಂಗ ವಾದಕ ಕಪ್ಪಸ್ವಾಮಿ ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.ಆರ್.ನಾಗರತ್ನಮ್ಮ ಅವರ ಸ್ತ್ರೀ ನಾಟಕ ಮಂಡಳಿ, ಮಹದೇವಸ್ವಾಮಿ ಕಂಪೆನಿ, ಕನ್ನಡ ಥಿಯೇಟರ್, ಮಾಸ್ಟರ್ ಹಿರಣಯ್ಯ ಮಿತ್ರ ಮಂಡಳಿ ಸೇರಿದಂತೆ ಹಲವು ನಾಟಕ ಕಂಪೆನಿಗಳ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಅವರು ಹೆಸರು ಮಾಡಿದ್ದರು. ಪ್ರೇಮಾಸ್ವಾಮಿ ಅವರ ಅಂತ್ಯಕ್ರಿಯೆ ಸೋಮವಾರ ಹರಿಶ್ಚಂದ್ರ ಘಾಟ್‌ನಲ್ಲಿ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry