ಕಲಾವಿದೆ ಪ್ಲೋರಿನಾಬಾಯಿ ಅಸ್ವಸ್ಥ

6

ಕಲಾವಿದೆ ಪ್ಲೋರಿನಾಬಾಯಿ ಅಸ್ವಸ್ಥ

Published:
Updated:
ಕಲಾವಿದೆ ಪ್ಲೋರಿನಾಬಾಯಿ ಅಸ್ವಸ್ಥ

ಗದಗ: ನಗರದ ರಂಗ ಕಲಾವಿದೆ ಪ್ಲೋರಿನಾಬಾಯಿ ಅವರು ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು, ಹುಬ್ಬಳ್ಳಿಯ ಡಾ. ದತ್ತಾ ನಾಡಿಗೇರ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ಗದುಗಿನ ಡಾ. ಎಸ್.ಬಿ. ಶೆಟ್ಟರ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರಾ ಸಂಕಷ್ಟದಲ್ಲಿರುವ ಪ್ಲೋರಿನಾಬಾಯಿ ಅವರಿಗೆ ಹಣಕಾಸಿನ ನೆರವು ಅಗತ್ಯವಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಂಗ ಕಲಾವಿದೆ ಪ್ಲೋರಿನಾಬಾಯಿ ಅವರ ಚಿಕಿತ್ಸೆಗೆ ಸರ್ಕಾರ, ಸಂಘ ಸಂಸ್ಥೆಗಳು ನೆರವಾಗಬೇಕು ಎಂಬುದು ರಂಗಾಸಕ್ತರ ಆಗ್ರಹವಾಗಿದೆ.ಪ್ಲೋರಿನಾ ಅವರ ವಿಳಾಸ: ಎಚ್. ಪ್ಲೋರಿನಾ, ಡ್ರಾಮಾ ಆ್ಯಕ್ಟರ್ಸ್, ಹಳ್ಳಿಕೇರಿ ಚಾಲ್, ಬಸವೇಶ್ವರ ರಸ್ತೆ, ಗದಗ ಎಂದು ಗುರು ಕೊಟ್ಟೂರೇಶ್ವರ ನಾಟಕ ಸಂಘದ ಮಾಲೀಕ ಕೆ.ಎನ್. ಲಕ್ಕುಂಡಿ (ದೂ. 93424 83237) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry