ಕಲಾಸಿಪಾಳ್ಯ ಹೈಟೆಕ್ ನಿಲ್ದಾಣಕ್ಕೆ ಶಂಕುಸ್ಥಾಪನೆ

ಬೆಂಗಳೂರು: ಕಲಾಸಿಪಾಳ್ಯದಲ್ಲಿ ಬಿಎಂಟಿಸಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಹೈಟೆಕ್ ಬಸ್ ನಿಲ್ದಾಣವನ್ನು ₹ 143 ಕೋಟಿ ಅಂದಾಜು ವೆಚ್ಚದಲ್ಲಿ ಮೂರು ಹಂತಗಳಲ್ಲಿ ನಿರ್ಮಿಸಲು ಬಿಎಂಟಿಸಿ ಯೋಜನೆ ರೂಪಿಸಿದೆ.
ಮೊದಲನೇ ಹಂತ: ನೆಲ ಅಂತಸ್ತಿನಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಮತ್ತು ಅಂತರರಾಜ್ಯ ಬಸ್ ನಿಲುಗಡೆಗೆ ಪ್ಲಾಟ್ಫಾರಂಗಳು, ಹೈಟೆಕ್ ಶೌಚಾಲಯ, ಆಸನಗಳು, ಶುದ್ಧ ಕುಡಿಯುವ ನೀರು, ಪಾಸ್ ಕೌಂಟರ್, ಸಾರ್ವಜನಿಕ ವಾಹನ ನಿಲುಗಡೆ, ಆಟೊ ನಿಲ್ದಾಣ, ಅಂಚೆಕಚೇರಿ, ಎಂಟಿಎಂ ಇತ್ಯಾದಿ ಸೌಲಭ್ಯಗಳು ಲಭ್ಯವಾಗಲಿವೆ.
ಮಧ್ಯದ ಅಂತಸ್ತಿನಲ್ಲಿ ಬಿಎಂಟಿಸಿ ಕಚೇರಿ, ವಿಶ್ರಾಂತಿ ಗೃಹ ಮತ್ತು ಶೌಚಗೃಹ ಇರಲಿವೆ. ಮೊದಲನೇ ಅಂತಸ್ತಿನಲ್ಲಿ ಕಿಯೋಸ್ಕ್ ಯಂತ್ರ, ಉಪಾಹಾರ ಗೃಹ, ಶೌಚಾಲಯ, ನಿರ್ವಹಣಾ ವ್ಯವಸ್ಥೆ ಸೌಲಭ್ಯ, ವಾಹನಗಳ ನಿಲುಗಡೆ ವ್ಯವಸ್ಥೆ ಆಗಲಿದೆ.
ಎರಡನೇ ಹಂತದ ಕಾಮಗಾರಿಯಲ್ಲಿ 2ನೇ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ 3ನೇ ಅಂತಸ್ತಿನಲ್ಲಿ ಕಚೇರಿ ನಿರ್ಮಾಣ.
ಮೂರನೇ ಹಂತದ ಕಾಮಗಾರಿಯಲ್ಲಿ 2 ಮತ್ತು 4ನೇ ಅಂತಸ್ತಿನಲ್ಲಿ ಮಲ್ಟಿಪ್ಲೆಕ್ಸ್, ಕಚೇರಿಗಳ ನಿರ್ಮಾಣ. 5ನೇ ಅಂತಸ್ತಿನಲ್ಲಿ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೌಲಭ್ಯಗಳು
* ಸುರಂಗ ಪಾದಚಾರಿ ಮಾರ್ಗ
* ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ
* ಹೈಟೆಕ್ ಶೌಚಾಲಯ
* ಆಸನಗಳ ವ್ಯವಸ್ಥೆ
* ಲಿಫ್ಟ್ ಸೌಕರ್ಯ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.