ಕಲಾ ಮಾಧ್ಯಮದಲ್ಲಿ `ಕರಕುಶಲ ಜಗತ್ತು'

7

ಕಲಾ ಮಾಧ್ಯಮದಲ್ಲಿ `ಕರಕುಶಲ ಜಗತ್ತು'

Published:
Updated:
ಕಲಾ ಮಾಧ್ಯಮದಲ್ಲಿ `ಕರಕುಶಲ ಜಗತ್ತು'

ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಕರಕುಶಲಕರ್ಮಿಗಳ ಉತ್ಪನ್ನಗಳು ಒಂದೇ ಸೂರಿನಡಿ ಮಾರಾಟವಾಗುತ್ತಿವೆ. ಕಚೇರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಮಂದಿ ಒಮ್ಮೆ ಭೇಟಿ ನೀಡಿ ಅಪರೂಪದ ವಸ್ತುಗಳನ್ನು ಕೊಂಡೊಯ್ಯುವ ಧಾವಂತದಲ್ಲಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರದವರೆಗೆ (ಡಿ.16) ನಡೆಯಲಿರುವ 2012ರ ಕಲಾ ಮಾಧ್ಯಮ ಮೇಳದ್ಲ್ಲಲೀಗ ಹಬ್ಬದ ವಾತಾವರಣ. ರಾಜಸ್ತಾನ, ಗುಜರಾತ್, ಮುಂಬೈ, ಇಂದೋರ್, ಒಡಿಶಾ, ದೆಹಲಿ ಸೇರಿದಂತೆ ಇನ್ನಿತರೆ ರಾಜ್ಯಗಳ ಕರಕುಶಲಕರ್ಮಿಗಳು ಇಲ್ಲಿ ಮಳಿಗೆ ಹಾಕಿದ್ದಾರೆ. ಅಪರೂಪದ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಲೆಂದು ಪರಿಷತ್ತಿನ ಆವರಣದಲ್ಲಿ ಬಿಡಾರ ಹಾಕಿಕೊಂಡಿದ್ದಾರೆ.`ಹತ್ತು ವರ್ಷಗಳಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ರಾಜಸ್ತಾನದ ಸೂತ್ರದ ಬೊಂಬೆಗಳನ್ನು ಮಾರಾಟ ಮಾಡುತ್ತೇನೆ. ಈ ಬಾರಿ ವ್ಯಾಪಾರ ಕಡಿಮೆ ಆಗಿದೆ. ವಾರಾಂತ್ಯದಲ್ಲಿ ವಹಿವಾಟು ಹೆಚ್ಚಾಗಬಹುದು' ಎಂದು ಭರವಸೆ ಮಾತುಗಳನ್ನಾಡುತ್ತಾರೆ ರಾಜಸ್ತಾನದಿಂದ ಬಂದಿರುವ ಲೇಖರಾಜ.ಗಾಜಿನ ದೀಪಗಳು, ಮಣ್ಣಿನ ಮಡಿಕೆಗಳು, ಆಭರಣಗಳು ಮತ್ತು ಉಡುಪುಗಳು, ಇಕ್ಕತ್, ಬಾಂಧನಿ, ರೇಷ್ಮೆ ಸೀರೆಗಳು ಮೇಳದಲ್ಲಿ ಹೆಂಗಳೆಯರ ಗಮನ ಸೆಳೆಯುತ್ತಿವೆ. `ನಮ್ಮಲ್ಲಿ ಅಪರೂಪದ ಕರಕುಶಲ ಉತ್ಪನ್ನಗಳಿವೆ. ಅವುಗಳಲ್ಲಿ ನಾಮಫಲಕಗಳು, ಗಡಿಯಾರ, ಪಿಕ್ಚರ್ ಫ್ರೇಮ್‌ಗಳು ಪ್ರಮುಖವಾಗಿವೆ. ಇವೆಲ್ಲವನ್ನು ದಿನಪತ್ರಿಕೆ ಹಾಗೂ ಕಸೂರಿ ಮೇಥಿಯಿಂದ ಮಾಡಲಾಗಿದೆ. ಇವು ಗಟ್ಟಿಯಾಗಿವೆ ಹಾಗೂ ಬಾಳಿಕೆ ಬರುತ್ತವೆ' ಎಂದು ಉತ್ಪನ್ನಗಳ ಬಗ್ಗೆ ವಿವರಣೆ ನೀಡುತ್ತಾರೆ ಬಿಕನೇರ್‌ನಿಂದ ಬಂದಿರುವ ಕಲಾವಿದ ನೌಷದ್.`ಸಾಂಪ್ರದಾಯಿಕವಾಗಿ ಧರಿಸುವ ಕುರ್ತಾ, ಸೀರೆ ಹಾಗೂ ಆಕರ್ಷಕ ವಿನ್ಯಾಸದ ಒಡವೆಗಳು ಇಷ್ಟವಾಗುತ್ತವೆ' ಎನ್ನುತ್ತಾರೆ ಗ್ರಾಹಕರಾದ ಶ್ವೇತಾ. ಇವಿಷ್ಟೇ ಅಲ್ಲದೆ ಟೆರ‌್ರಾಕೋಟಾ ಉತ್ಪನ್ನಗಳು ಹಾಗೂ ಬಣ್ಣಬಣ್ಣದ ಕೀ ಚೈನ್‌ಗಳು, ಮರದ ಪಿಠೋಪಕರಣಗಳು, ಮಾರ್ಬಲ್, ಪಿಂಗಾಣಿ ಗೃಹಬಳಕೆ ಉತ್ಪನ್ನಗಳು ಆಕರ್ಷಕವಾಗಿವೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry