ಕಲಾ ಸಮರ್ಪಣಂ ಸಂಜೆ

7

ಕಲಾ ಸಮರ್ಪಣಂ ಸಂಜೆ

Published:
Updated:

ಮಾನಸಿಕ ಅಸ್ವಸ್ಥರ ನೆರವಿಗಾಗಿ `ದಿ ರಿಚ್ಮಂಡ್ ಫೆಲೋಷಿಪ್ ಸೊಸೈಟಿ~ಯು ಶನಿವಾರ (ಮೇ.12) `ಕಲಾ ಸಮರ್ಪಣಂ~ ಎಂಬ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.

ಸೇವಾ ಉದ್ದೇಶದಿಂದ 1986ರಲ್ಲಿ ಆರಂಭವಾದ `ದಿ ರಿಚ್ಮಂಡ್ ಫೆಲೋಷಿಪ್ ಸೊಸೈಟಿ~ ಕಳೆದ 25 ವರ್ಷಗಳಿಂದ ಮಾನಸಿಕ ಅಸ್ವಸ್ಥರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆ. ಮಾನಸಿಕ ಅಸ್ವಸ್ಥರು ಹಾಗೂ ಅವರ ಕುಟುಂಬದವರಿಗೂ ಸಮಾಲೋಚನೆ ನಡೆಸಲಾಗುತ್ತದೆ.

ಸೊಸೈಟಿಯು ಆಶಾ, ಜ್ಯೋತಿ ಸೇವಾ ಸಂಸ್ಥೆಗಳ ಜೊತೆಗೆ ಚೇತನ ಡೇ ಕೇರ್ ಸೆಂಟರ್ ನಡೆಸುತ್ತಿದೆ. ಚೇತನ ಡೇ ಕೇರ್ ಸೆಂಟರ್‌ನಲ್ಲಿ 45 ಮಂದಿ ಮಾನಸಿಕ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ತೇಜಸ್ವಿನಿ ಕೋದಂಡರಾಮ ಅವರಿಂದ (ಗುರು ಆರ್.ಎ.ರಮಾಮಣಿ) ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ.

ಶ್ರುತಿ ರಾಜಲಕ್ಷ್ಮಿ ಅವರಿಂದ ನೃತ್ಯ ಪ್ರದರ್ಶನ (ಗುರು ಬಿ. ಭಾನುಮತಿ ಮತ್ತು ಶೀಲಾ ಚಂದ್ರಶೇಖರ). ನಂತರ ನೇಹಾ ಶೇಷಾದ್ರಿನಾಥ್ ಅವರಿಂದ ನೃತ್ಯ ಪ್ರದರ್ಶನ (ಗುರುಗಳಾದ ನಿರುಪಮಾ ಮತ್ತು ರಾಜೇಂದ್ರ).

 ತೇಜಸ್ವಿನಿ ಕೋದಂಡರಾಮ, ಶ್ರುತಿ ರಾಜಲಕ್ಷ್ಮಿ ಹಾಗೂ ನೇಹಾ ಶೇಷಾದ್ರಿನಾಥ್ ಅವರು ಎಂ.ಎಸ್‌ಸಿ (ಸೈಕೋಸೋಷಿಯಲ್ ರಿಹೆಬಿಲಿಟೇಷನ್) ಪ್ರಥಮ ವರ್ಷದ ವಿದ್ಯಾರ್ಥಿನಿಯರು. ಚೇತನ ಡೇ ಕೇರ್ ಸೆಂಟರ್‌ನ ಮಾನಸಿಕ ಅಸ್ವಸ್ಥರ ನೆರವಿಗಾಗಿ ಈ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಮೂಲಕ ಕತ್ತಲೆಯಲ್ಲಿ ಬದುಕುತ್ತಿರುವ ರೋಗಿಗಳ ಬಾಳಲ್ಲಿ ಬೆಳಕಿನ ಅಣತೆ ಹಚ್ಚಲು ಅಳಿಲು ಸೇವೆ ಮಾಡುತ್ತಿದ್ದಾರೆ ಈ ವಿದ್ಯಾರ್ಥಿಗಳು. ಕಾರ್ಯಕ್ರಮದಿಂದ ಬರುವ ಹಣವನ್ನು ಚೇತನ ಡೇ ಕೇರ್ ಸೆಂಟರ್‌ಗೆ ದೇಣಿಗೆ ನೀಡಲಿದ್ದಾರೆ.

ಸರ್ವೋದಯ ಇಂಟರ್‌ನ್ಯಾಷನಲ್‌ಟ್ರಸ್ಟ್‌ನ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಪಿ.ಎ. ನಜರೇತ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸ್ಥಳ: ಜೆ.ಎಸ್,ಎಸ್. ಸಭಾಂಗಣ, ಜೆ.ಎಸ್,ಎಸ್. ಕಾಲೇಜು ಕ್ಯಾಂಪಸ್, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ಸಂಜೆ 6.

ಟಿಕೆಟ್‌ಗಳ ದರ 200, 500,1000. ಟಿಕೆಟ್ ಹಾಗೂ ಮಾಹಿತಿಗೆ 26645583, 22446734.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry