ಭಾನುವಾರ, ಆಗಸ್ಟ್ 18, 2019
24 °C

ಕಲಿಕಾ ಕಾರ್ಯಾಗಾರ

Published:
Updated:

ನೆಲಮಂಗಲ: ಪರಿಚಿತ ಸಾಮಾನ್ಯ ವಸ್ತುಗಳನ್ನೇ ಬಳಸಿ ಪಾಠ ಮಾಡಿದರೆ ಅದನ್ನು ಮಕ್ಕಳು ಬೇಗ ಗ್ರಹಿಸುತ್ತಾರೆ' ಎಂದು ಶಿಕ್ಷಕ ರುದ್ರಸ್ವಾಮಿ ತಿಳಿಸಿದರು.ಪಟ್ಟಣದ ವಿಶಾಲ್ ಆಂಗ್ಲಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಒಂದು ದಿನದ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರುದ್ರಸ್ವಾಮಿ ಅವರು ಕನ್ನಡ, ಇಂಗ್ಲಿಷ್ ಮತ್ತು ಗಣಿತವನ್ನು ಚಿತ್ರಪಟಗಳ ಮೂಲಕ ಕಲಿಯುವ ಜಪಾನಿನ ಓಲಿಗಾಮಿ ಮಾದರಿ ಶಿಕ್ಷಣ ಕಲೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.ರುದ್ರಸ್ವಾಮಿ ಅವರನ್ನು ಸಂಸ್ಥಾಪಕ ಟಿ.ಕೆ.ನರಸೇಗೌಡ ಸನ್ಮಾನಿಸಿದರು. ಪ್ರಾಂಶುಪಾಲ ಎ.ಟಿ.ರಾಜು, ಮುಖ್ಯಶಿಕ್ಷಕಿ ಹಸ್ಮತ್ ಉನ್ನಿಸ್ಸಾ ಉಪಸ್ಥಿತರಿದ್ದರು.

Post Comments (+)