ಗುರುವಾರ , ಮಾರ್ಚ್ 4, 2021
21 °C

ಕಲಿಕೆಯಿಂದ ಪ್ರಗತಿ ಸಾಧ್ಯ: ಡಾ.ಚಂದಾವರಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಿಕೆಯಿಂದ ಪ್ರಗತಿ ಸಾಧ್ಯ: ಡಾ.ಚಂದಾವರಕರ

ಬೆಂಗಳೂರು: ಕಲಿಕೆ ನಿರಂತರ. ಅದಕ್ಕೆ ವಯಸ್ಸಿನ ಮಿತಿ ಇಲ್ಲ. ಕಲಿಕೆ ಮನುಷ್ಯನನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಆದ್ದರಿಂದ ಮಹಿಳೆಯರು ಎಂದಿಗೂ ಕಲಿಕೆಯನ್ನು ನಿಲ್ಲಿಸಬಾರದು ಎಂದು ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಮೀನಾ ಚಂದಾವರಕರ ಸಲಹೆ ನೀಡಿದರು.ನಗರದ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಸೋಮವಾರ ನಡೆದ  ‘ಶಕ್ತಿ : ಸಬಲ ಮಹಿಳೆ, ಸಬಲ ಭಾರತ’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಕಲಿಕೆಯ ಪ್ರತಿ ಹಂತದಲ್ಲೂ ಮಾನವ ಪ್ರಗತಿಯ ಮೆಟ್ಟಿಲೇರುತ್ತಾನೆ. ಕಲಿಕೆಯಿಂದ ಆಲೋಚನಾ ವಿಧಾನ, ಕಾರ್ಯವೈಖರಿ, ನಡವಳಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಉತ್ತಮ ಬದಲಾವಣೆ ಕಾಣಬಹುದು. ಇದರಿಂದಾಗಿ ಮಹಿಳೆಯರು ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಪ್ರೊ.ಸೀಮಾ ಮಾತನಾಡಿ, ‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಿಂಸೆಯನ್ನು ತಡೆಯಲು ಅನ್ಯರ ಅಗತ್ಯ ಇಲ್ಲ. ಬದಲಾಗಿ ಮಹಿಳೆಯೇ ಆತ್ಮರಕ್ಷಣೆಗೆ ಅಗತ್ಯವಾದ ವಿದ್ಯೆಗಳನ್ನು ಕಲಿತರೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಬಹಳ ಸುಲಭ. ರಕ್ಷಣೆಗಾಗಿ ಯಾವ ಆಯುಧಗಳ ಅಗತ್ಯವೇ ಇರುವುದಿಲ್ಲ’ ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಅರ್ಪಣಾ, ನಿವೃತ್ತ ಪ್ರಾಂಶುಪಾಲರಾದ ಎಂ. ಜುನೈತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.