ಕಲಿಕೆಯೇ ಜೀವನವೆನ್ನುವ ಸೋನಮ್

7

ಕಲಿಕೆಯೇ ಜೀವನವೆನ್ನುವ ಸೋನಮ್

Published:
Updated:

`ಮನುಷ್ಯನಾದ ಮೇಲೆ ಜೀವನದ ಘಟನೆಗಳಿಂದ ಪಾಠ ಕಲಿಯುತ್ತ ಹೋಗಬೇಕೇ ಹೊರತು ವಿಷಾದಿಸಬಾರದು. ಪ್ರತಿಯೊಂದರಲ್ಲೂ ಒಂದೊಂದು ಪಾಠವಿರುತ್ತದೆ. ಅದನ್ನು ಅಪ್ಪಿಕೊಳ್ಳುತ್ತ, ಕಲಿಯುತ್ತ ಮುಂದುವರಿಯುವುದೇ ಜೀವನ' ಅಂತ ಸೋನಮ್ ಕಪೂರ್ ಹೇಳುತ್ತಿದ್ದಾರೆ.2012 ಅನ್ನು ನೀರಸವಾಗಿ ಕಳೆದಿರುವ ಸೋನಮ್ ಸುದ್ದಿಯಾಗಿದ್ದು ಮಾಧ್ಯಮದವರೊಂದಿಗೆ ಜಗಳವಾಡುತ್ತಲೇ ವಿನಾ ಚಿತ್ರಗಳಿಂದಲ್ಲ. ಆದರೆ 2013 ಆಶಾದಾಯಕವಾಗಿದೆ. ಅವರ ಅಭಿನಯದ `ರಾಂಝನಾ' `ಭಾಗ್ ಮಿಲ್ಖಾ ಭಾಗ್' ತೆರೆ ಕಾಣಲಿವೆ.

ಅವಕಾಶಗಳ ಬಗ್ಗೆ ಮಾತನಾಡುತ್ತಿದ್ದ ಸೋನಮ್ ತಮ್ಮ ವ್ಯಕ್ತಿತ್ವ ಹಾಗೂ 2012ರ ಬಗ್ಗೆ ಮುಕ್ತವಾಗಿ ಹರಟಿದ್ದಾರೆ. ಅವರು ನಿರ್ವಹಿಸಿರುವ ಪಾತ್ರಗಳಲ್ಲಿ ಅವರ ಜೀವನಕ್ಕೆ ಸಮೀಪವಾಗಿರುವ ಪಾತ್ರ ಯಾವುದು ಎಂದು ಕೇಳಿದರೆ, ಸೋನಮ್ ಒಂದರೆ ಕ್ಷಣ ಸುಮ್ಮನಾಗುತ್ತಾರೆ.ತಮ್ಮದು ಅತಿ ಸಂಕೀರ್ಣಮಯ ವ್ಯಕ್ತಿತ್ವ. ಸಿನಿಮಾದ ಯಾವ ಪಾತ್ರಗಳೂ ತಮ್ಮ ವ್ಯಕ್ತಿತ್ವದಂತೆ ನಿರೂಪಿಸಲು ಸಾಧ್ಯವೇ ಇಲ್ಲ ಎಂದು ಒಪ್ಪಿಕೊಳ್ಳುವ ಅವರು, ಆಗಿರುವುದಕ್ಕೆಲ್ಲ ವಿಷಾದಿಸುತ್ತ ಕೂರುವುದಿಲ್ಲವಂತೆ. ಪಶ್ಚಾತ್ತಾಪವೂ ಇಲ್ಲವಂತೆ. ಪ್ರತಿಯೊಂದು ಘಟನೆಯೂ ಅವರಿಗೆ ಪಾಠಗಳಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ ಈ `ಸಾವರಿಯಾ' ಸುಂದರಿ.`ಸಾವರಿಯಾ', `ಅಯೆಶಾ', `ಡೆಲ್ಹಿ 6', `ಥ್ಯಾಂಕ್ ಯೂ', `ಮೌಸಮ್', `ಪ್ಲೇಯರ್ಸ್' ಮುಂತಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಿಂದಲೇ ಗುರುತಿಸಿಕೊಂಡಿರುವ ಸೋನಮ್‌ಗೆ ತಮ್ಮ ಭಾರತೀಯ ಲುಕ್‌ನ ಬಗ್ಗೆ ಹೆಮ್ಮೆ ಇದೆಯಂತೆ. ಆದರೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳದಿರುವ ಕುರಿತು ಅಸಮಾಧಾನವೂ ಇದೆಯಂತೆ. `ಪ್ಲೇಯರ್ಸ್' ಚಿತ್ರದಲ್ಲಿ ಮಾತ್ರ ಮಾಡ್ ಹುಡುಗಿಯ ಪಾತ್ರವಿತ್ತೇ ಹೊರತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಅವಕಾಶವಿರಲಿಲ್ಲ ಎಂದೆಲ್ಲ ಸೋನಮ್ ಹೇಳಿಕೊಂಡಿದ್ದಾರೆ.ಇದೀಗ `ರಾಂಝನಾ' ಚಿತ್ರದಲ್ಲಿಯೂ ಭಾರತೀಯ ಲುಕ್ ಇರುವ ಪಾತ್ರವಂತೆ. ಬನಾರಸ್‌ನ ಹುಡುಗಿಯೊಬ್ಬಳು, ನವದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯಕ್ಕೆ ಬರುವ ಪಾತ್ರ ಅದು. ಈ ಡಿ-ಗ್ಲಾಮ್ ಪಾತ್ರಗಳಿಂದಾಗಿ ಎಲ್ಲರೂ ಅಭಿನಯವೇ ಗಮನಿಸುವಂತಾಯಿತು ಎನ್ನುವುದು ಸೋನಮ್ ಸಮಾಧಾನ.ಆದರೆ ಸಾಕಷ್ಟು ಜನ ವಸ್ತ್ರ ವಿನ್ಯಾಸಕರು, ಸ್ಟೈಲಿಸ್ಟ್‌ಗಳೇ ಸ್ನೇಹಿತರಾಗಿರುವ ಸೋನಮ್‌ಗೆ ಎಲ್ಲರೂ ಕೇಳುವುದು ಒಂದೇ ಪ್ರಶ್ನೆಯಂತೆ! ಸ್ಟೈಲಿಸ್ಟ್ ಸೋನಮ್‌ಗೆ ನೋಡುವುದು ಯಾವಾಗ ಎಂದು? ಹೇಳಿ ನಗುವ ಸೋನಮ್ ಭಾರತೀಯ ಉಡುಗೆಗಳಲ್ಲಿ ಸರಳ ಸುಂದರಿಯಾಗಿ ಕಾಣಿಸಿಕೊಳ್ಳುವುದೇ ಇಷ್ಟ ಎಂದೂ ಹೇಳುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry