ಕಲಿಕೋತ್ಸವದಲ್ಲಿ ನಕ್ಕುನಲಿದು, ಗೆದ್ದ ಮಕ್ಕಳು...

7

ಕಲಿಕೋತ್ಸವದಲ್ಲಿ ನಕ್ಕುನಲಿದು, ಗೆದ್ದ ಮಕ್ಕಳು...

Published:
Updated:

ಚಿಕ್ಕಬಳ್ಳಾಪುರ: ಶಾಲಾಮಟ್ಟದಲ್ಲಿ ಇದೇ ಮೊದಲ ಬಾರಿಗೆ ಆರಂಭಗೊಂಡ ಕಲಿಕೋತ್ಸವ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ಭಾರಿ ಸಂಭ್ರಮ–ಸಡಗರದಲ್ಲಿ ಕಂಡು ಬಂದರು.ಕ್ಲಸ್ಟರ್‌ಮಟ್ಟದ ಕಲಿಕೋತ್ಸವ ಸ್ಪರ್ಧೆಯಲ್ಲಿ ವಿಜೇತರಾಗಿ ಗುರುವಾರ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಮಕ್ಕಳು ಇಲ್ಲಿಯೂ ಕೂಡ ವಿಜೇತ­ರಾಗುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು. ಬಗೆಬಗೆಯ ವೇಷಭೂಷಣಗಳನ್ನು ತೊಟ್ಟದ್ದ ಮಕ್ಕಳು ಅಚ್ಚರಿ ಮೂಡಿಸುವ ಹಾಗೆ ಪ್ರತಿಭೆ ಪ್ರದರ್ಶಿಸಿದರು.‘ಇಂಥ ಸ್ಪರ್ಧೆಗಳಿಂದ ಮಕ್ಕಳಲ್ಲಿ ಜ್ಞಾನ ಹೆಚ್ಚಾಗುವುದಲ್ಲ, ಪಾಠ­ಗಳನ್ನು ಸುಲಭವಾಗಿ ಗ್ರಹಿಸಬ­ಹುದು’ ಎಂದು ಮಂಡಿಕಲ್ಲು ಸರ್ಕಾರಿ ಶಾಲೆ ಶಿಕ್ಷಕಿ ಶೈಲಜಾ ಹೇಳಿದರು.ಇದಕ್ಕೂ ಮುನ್ನ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ನಡೆದ ಕಲಿಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಅಜಿತ್‌ಪ್ರಸಾದ್‌ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಶ್ರೀಕಂಠ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದ ಅಧಿಕಾರಿ ಮಂಜು­ನಾಥ್‌, ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಚಂದ್ರಶೇಖರ್‌­ಬಾಬು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಕ್ಷಕ್ಷ ಹನುಮಂತಪ್ಪ, ತಾಲ್ಲೂಕು ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ಅಧ್ಯಕ್ಷ  ಬಾಬುರಾಜೇಂದ್ರ ಪ್ರಸಾದ್‌, ಸಂಪನೂ್ಮಲ ಶಿಕ್ಷಕರಾದ ನಜೀರ್‌, ನರಸಿಂಹಮೂರ್ತಿ, ಎನ್‌.­ವೆಂಕ­ಟೇಶಪ್ಪ ಹಾಜರಿದ್ದರು. ಸಭಾಂಗಣ ಕಿರಿದಾಗಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆ­ಯಲ್ಲಿ ಬಂದಿದ್ದ ಕಾರಣ ಅವರೆಲ್ಲರೂ ಸಭಾಂಗಣದ ಹೊರಗಡೆಯೇ ಕೂತು ಮತ್ತು ನಿಂತು ಕಾರ್ಯಕ್ರಮ ವೀಕ್ಷಿಸಿದರು.ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 1 ರಿಂದ 5ನೇ ತರಗತಿ (ವೈಯಕ್ತಿತ ವಿಭಾಗ): ಸ್ವರಭಾರಯುಕ್ತ ಓದು­ವುದು–ಮರದಹಳ್ಳಿ ಸರ್ಕಾರಿ ಶಾಲೆಯ ಜಿ.ಗಂಗೋತ್ರಿ, ಕಂಠಪಾಠ–ಚಾಮ­ರಾಜಪೇಟೆ ಸರ್ಕಾರಿ ಶಾಲೆಯ ಗೌಸಿಯಾ, ಉಕ್ತಲೇಖನ–ಮರದಹಳ್ಳಿ ಸರ್ಕಾರಿ ಶಾಲೆಯ ಜಿ.ಗಂಗೋತ್ರಿ, ಪದ ಬರೆಯುವುದು–ಹರಿಸ್ಥಳ ಸರ್ಕಾರಿ ಶಾಲೆಯ ನವ್ಯಾ, ಪದ ಓದುವುದು–ಅಡ್ಡಗಲ್ಲು ಸರ್ಕಾರಿ ಶಾಲೆಯ ಸುಭಾಷ್‌, ರೇಖಾಕೃತಿಗಳ ಬಗ್ಗೆ ಆಶುಭಾಷಣ–ತುಮಕಲಹಳ್ಳಿ ಸರ್ಕಾರಿ ಶಾಲೆಯ ಟಿ.ಪಿ.ಸುಧಾಕರ್‌, ಗುಣಾ­ಕಾರ ಮಗ್ಗಿ–ತುಮಕಲಹಳ್ಳಿ ಸರ್ಕಾರಿ ಶಾಲೆಯ ಮಂಜುನಾಥ್‌, ಪದ್ಯ ಹಾಡುವುದು–ಜಡೇನಹಳ್ಳಿ ಸರ್ಕಾರಿ ಶಾಲೆಯ ಭಾರ್ಗವಿ.1 ರಿಂದ 5ನೇ ತರಗತಿ (ಸಾಮೂಹಿಕ ವಿಭಾಗ): ರಸಪ್ರಶ್ನೆ–ನೆಲಮಾಕನಹಳ್ಳಿ ಸರ್ಕಾರಿ ಶಾಲೆಯ ತೇಜಸ್ವಿನಿ ತಂಡ, ಪ್ರಥಮ ಭಾಷೆ ಸಂಭಾಷಣೆ–ಹೆಣ್ಣೂರು ಕದಿರೇನಹಳ್ಳಿ ಸರ್ಕಾರಿ ಶಾಲೆ ನಂದನ್‌ ತಂಡ, ಕಂದಕನಹಳ್ಳಿ ಸರ್ಕಾರಿ ಶಾಲೆಯ ಕೆ.ಆರ್‌.ವೇಣು ತಂಡ, ನಾಟಕ–ಸುಲ್ತಾನ್‌ಪೇಟೆ ಸರ್ಕಾರಿ ಶಾಲೆಯ ಸಹನಾ ತಂಡ.6 ರಿಂದ 8ನೇ ತರಗತಿ (ವೈಯಕ್ತಿಕ ವಿಭಾಗ): ಸ್ವರಭಾರಯುಕ್ತ ಓದುವುದು–ದಿಬ್ಬೂರು ಸರ್ಕಾರಿ ಶಾಲೆಯ ಕೆ.ಪಲ್ಲವಿ, ಪತ್ರಲೇಖನ (ಇಂಗ್ಲಿಷ್‌)–ಮಂಡಿಕಲ್ಲು ಸರ್ಕಾರಿ ಶಾಲೆಯ ವೈಷ್ಣವಿ, ಪತ್ರಲೇಖನ (ಕನ್ನಡ)–ನಲ್ಲಿಮರದಹಳ್ಳಿ ಸರ್ಕಾರಿ ಶಾಲೆಯ ಗಂಗೋತ್ರಿ, ರೇಖಾಕೃತಿಗಳ ಬಗ್ಗೆ ಆಶುಭಾಷಣ–ಕುಪ್ಪಳ್ಳಿ ಸರ್ಕಾರಿ ಶಾಲೆಯ ದಿವ್ಯಶ್ರೀ, ಬಾಯ್ದೆರೆ ಲೆಕ್ಕ–ಹೊಸಹುಡ್ಯ ಸರ್ಕಾರಿ ಶಾಲೆಯ ಪಲ್ಲವಿ, ಅಳತೆ ಮತ್ತು ತೂಕದ ಬಗ್ಗೆಗಿನ ಜ್ಞಾನ–ಗಂಗರೇಕಾಲುವೆ ಸರ್ಕಾರಿ ಶಾಲೆಯ ಮೌನಿಕಾ, ರಾಸಾಯನಿಕ ಸಂಕೇತಗಳನ್ನು ಮತ್ತು ಸೂತ್ರಗಳನ್ನು ಹೆಸರಿಸಿರುವುದು–ಕುಪ್ಪಳ್ಳಿ ಸರ್ಕಾರಿ ಶಾಲೆಯ ಮೌನಿಕಾ, ನಕ್ಷೆ ಮತ್ತು ಸ್ಥಳಗಳನ್ನು ಗುರುತಿಸುವುದು–ಕುಪ್ಪಳ್ಳಿ ಸರ್ಕಾರಿ ಶಾಲೆಯ ಕಿರಣ್, ಸ್ಪಲ್ಲಿಂಗ್ ಗೇಮ್‌–ರಾಮಚಂದ್ರ ಹೊಸೂರು ಸರ್ಕಾರಿ ಶಾಲೆಯ ಮೌನಶ್ರೀ, ಆಂಗಿಕ ಅಭಿನಯ–ಪೆರೇಸಂದ್ರದ ಶಿಲ್ಪಾ, ಕಥೆ ಹೇಳುವುದು–ತಿಪ್ಪೇನಹಳ್ಳಿ ಸರ್ಕಾರಿ ಶಾಲೆಯ ಪ್ರತಿಭಾ, ಭಾಷಾ ನಿಘಂಟು–ಕೇತನಹಳ್ಳಿ ಸರ್ಕಾರಿ ಶಾಲೆಯ ಭವಾನಿ, ರಿಡಲ್ಸ್–ಕುಪ್ಪಳ್ಳಿ ಸರ್ಕಾರಿ ಶಾಲೆಯ ಕಿರಣ್‌.6 ರಿಂದ 8ನೇ ತರಗತಿ (ಸಾಮೂಹಿಕ ವಿಭಾಗ): ರಸಪ್ರಶ್ನೆ–ಮಳ್ಳೂರು ಸರ್ಕಾರಿ ಶಾಲೆಯ ಬಾಲರಾಜ್‌ ತಂಡ, ತಿಪ್ಪೇನಹಳ್ಳಿ ಸರ್ಕಾರಿ ಶಾಲೆಯ ನಂದಿನಿ ತಂಡ, ಇಂಗಿ್ಲಷ್‌ ರಸಪ್ರಶ್ನೆ–ಕುಪ್ಪಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ತಂಡ, ನಾಟಕ–ನಂದಿ ಸರ್ಕಾರಿ ಶಾಲೆಯ ಚೇತನ್‌ಕುಮಾರ್‌ ತಂಡ, ಪ್ರಹಸನ–ಚಿಕ್ಕಬಳ್ಳಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ತಂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry