ಕಲಿಕೋತ್ಸವದಲ್ಲಿ ಸಂಭ್ರಮಿಸಿದ ಮಕ್ಕಳು

7

ಕಲಿಕೋತ್ಸವದಲ್ಲಿ ಸಂಭ್ರಮಿಸಿದ ಮಕ್ಕಳು

Published:
Updated:
ಕಲಿಕೋತ್ಸವದಲ್ಲಿ ಸಂಭ್ರಮಿಸಿದ ಮಕ್ಕಳು

ಪಾಂಡವಪುರ: ತಾಲ್ಲೂಕಿನ ತಾಳಶಾಸನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ‘ತಾಲ್ಲೂಕು ಮಟ್ಟದ ಕಲಿಕೋತ್ಸವ’ದಲ್ಲಿ  ಮಕ್ಕಳು ಸಂಭ್ರಮಿಸಿದರು.ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಅವಕಾಶ ಕಲ್ಪಿಸಿ, ಅವರ ಸಾಮರ್ಥ್ಯದ ಅನುಸಾರ ಕಲಿಕೆಗೆ ಪೂರಕವಾದ ವಾತಾವರಣವನ್ನುಂಟು ಮಾಡುವ ಸಲುವಾಗಿ ಶಾಲಾ, ಕ್ಲಸ್ಟರ್ ಹಂತದಲ್ಲಿ ಕಲಿಕೋತ್ಸವ ನಡೆಸಿ ಈಗ ತಾಲ್ಲೂಕು ಮಟ್ಟದಲ್ಲಿ ‘ಕಲಿಕೋತ್ಸವ’ನ್ನು  ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರವು ಆಯೋಜಿಸಿತ್ತು.ಕ್ಲಸ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಲಿಕೋತ್ಸವದಲ್ಲಿ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಒಟ್ಟು 30 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಹಲವಾರು ಸ್ಪರ್ಧೆಗಳಲ್ಲಿ ತಾಲ್ಲೂಕಿನ ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿಯ ಮಕ್ಕಳು ಉತ್ಸುಕರಾಗಿ ಭಾಗ ವಹಿಸಿದ್ದರು.

ಪಠ್ಯದಲ್ಲಿನ ‘ಶ್ರೀಕೃಷ್ಣ ಸುಧಾಮ’, ‘ರಾಣಿ ಅಬ್ಬಕ್ಕದೇವಿ’, ‘ಭರತನ ಭ್ರಾತೃತ್ವ’, ‘ಏಕಲವ್ಯ’, ‘ಜೀವಮೂತವಾಹನ’ ನಾಟಕಗಳನ್ನು ಮಕ್ಕಳು ನಿರರ್ಗಳವಾಗಿ ಅಭಿನಯಿಸಿ ನೋಡುಗರ, ಶಿಕ್ಷಕರು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾದರು.‘ತಾಲ್ಲೂಕು ಮಟ್ಟದ ಕಲಿಕೋತ್ಸವ’ವನ್ನು ಉದ್ಫಾಟಿಸಿ ಮಾತನಾಡಿದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ನಗರ  ಮಕ್ಕಳಿಗಿಂತ ಗ್ರಾಮೀಣ ಮಕ್ಕಳು ಹೆಚ್ಚು ಪ್ರತಿಭಾವನ್ವಿತರಾಗಿರುತ್ತಾರೆ ಎಂಬುದಕ್ಕೆ ಈ ಕಲಿಕೋತ್ಸವವೆ ಸಾಕ್ಷಿಯಾಗಿದೆ. ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಕೂಡ ಕಲಿಕೆಯೆಂದೆ ತಿಳಿಯಬೇಕಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯೆ ವಿ. ವಸಂತಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪ. ಸದಸ್ಯ ಎ.ಎಲ್. ಕೆಂಪೂಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ, ಉಪ ವಿಭಾಗಾಧಿಕಾರಿ ಬಿ. ವಾಣಿ, ತಹಶೀಲ್ದಾರ್ ಡಿ.ಎಸ್. ಶಿವಕುಮಾರಸ್ವಾಮಿ, ತಾ.ಪಂ. ಸದಸ್ಯರಾದ ಶೈಲಜಾ ಗೋವಿಂದರಾಜು, ಎಚ್.ಸ್ವಾಮೀ ಗೌಡ, ಕೆ.ಕೆ. ಗೌಡೇಗೌಡ, ಎಂ.ಕೆ. ಪುಟ್ಟೇಗೌಡ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry