ಕಲಿಕೋತ್ಸವ ಮಕ್ಕಳ ಪ್ರತಿಭೆಗೆ ವೇದಿಕೆ

7

ಕಲಿಕೋತ್ಸವ ಮಕ್ಕಳ ಪ್ರತಿಭೆಗೆ ವೇದಿಕೆ

Published:
Updated:

ಕೆಜಿಎಫ್‌: ಮಕ್ಕಳಲ್ಲಿ ಅಡಗಿರುವ ಪರಿಪೂರ್ಣತೆ ಅಭಿವ್ಯಕ್ತಿಯಾಗಬೇಕು. ಪಠ್ಯಕ್ರಮದಲ್ಲಿರುವ ಪಾಠಗಳನ್ನು ಓರೆಗಚ್ಚಿ ನೋಡುವ ವೇದಿಕೆ ಮಕ್ಕಳಿಗೆ ಸಿಗಬೇಕು. ಮೂವತ್ತೊಂದು ವಿಷಯಗಳ ಕಲಿಕೋತ್ಸವ ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ವೇದಿಕೆ ಎಂದು ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಬಿ.ಜಿ.ನಾರಾಯಣಸ್ವಾಮಿ ತಿಳಿಸಿದರು.ಬೆಮಲ್‌ ನಗರದಲ್ಲಿ ಗುರುವಾರ ನಡೆದ ಕಲಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಾಗ­ರಾಜಾಚಾರಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ನಡೆಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರು.ನಗರಸಭೆ ಸದಸ್ಯೆ ಉಮಾ, ಪ್ರಾಂಶು­ಪಾಲ ಸುಬ್ರಹ್ಮಣಿ ಮಾತನಾಡಿದರು. 360 ವಿದ್ಯಾರ್ಥಿಗಳು ವಿವಿಧ ಕಲೆಗಳ ಪ್ರದರ್ಶನ ಮಾಡಿದರು.ಶಿಕ್ಷಣ ಇಲಾಖೆ ಅಧಿಕಾರಿಗಳಾದ ಮಂಜುನಾಥಾಚಾರಿ, ರುಕ್ಮಿಣಮ್ಮ, ಸ್ಟೆಲ್ಲಾ, ಗೋವಿಂದರಾಜು, ನಾಟೀಕರ್‌, ನಾರಾಯಣಸ್ವಾಮಿ, ಹೇಮಂತ್‌­ಕುಮಾರ್‌ ಹಾಜರಿದ್ದರು. ಶ್ರೀದೇವಿ ಸ್ವಾಗತಿಸಿದರು. ಶಶಿಧರ್‌ ವಂದಿಸಿದರು. ಶ್ರೀನಿವಾಸ್‌ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry