ಕಲಿತ ಶಾಲೆಯ ಪ್ರಗತಿಗಾಗಿ ಶ್ರಮಿಸುವುದು ಅಗತ್ಯ

7

ಕಲಿತ ಶಾಲೆಯ ಪ್ರಗತಿಗಾಗಿ ಶ್ರಮಿಸುವುದು ಅಗತ್ಯ

Published:
Updated:
ಕಲಿತ ಶಾಲೆಯ ಪ್ರಗತಿಗಾಗಿ ಶ್ರಮಿಸುವುದು ಅಗತ್ಯ

ಜಮಖಂಡಿ: ಶಿಕ್ಷಣ ಪಡೆದು ತಮ್ಮ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸಿಕೊಂಡಿರುವ ಹಳೆಯ ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆದ ಕಾಲೇಜಿನ ಪ್ರಗತಿಗಾಗಿ ಸೇವೆ ಸಲ್ಲಿಸುವುದು ಅಗತ್ಯ ಎಂದು ನಿವೃತ್ತ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಲ್. ಬಿ.ಶಿರಗುಪ್ಪಿ ಹೇಳಿದರು.ಸ್ಥಳೀಯ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ಸಭಾ ಭವನದಲ್ಲಿ ಬುಧವಾರ  ನಡೆದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಹಾಗೂ ಸಂಘದ ವೆಬ್‌ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯಾತ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಇಂದಿನ ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ವೆಬಸೈಟ್ ಸಂಪರ್ಕ ಸೇತುವೆ ಯಾಗಲಿದೆ. ವೆಬ್‌ಸೈಟ್ (ಡಿಡಿಡಿ. ಚ್ಝಿಛಿಚ್ಜಚ್ಝ್ಠಞ್ಞಜಿ.್ಚಟಞ) ಮೂಲಕ ಉಪಯುಕ್ತ ಸಲಹೆ, ಸೂಚನೆಗಳನ್ನು ನೀಡಿ ಕಾಲೇಜಿನ ಅಭಿವೃದ್ಧಿಗೆ ನೆರವಾಗಬೇಕು ಎಂದರು.ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ ಮಾತನಾಡಿ, ಕೇವಲ ಮಹಾನಗರಗಳಿಗೆ ಸೀಮಿತ ವಾಗಿರುವ ಟಾಪ್ ಟೆನ್ ಕಾಲೇಜುಗಳನ್ನು ಗುರುತಿಸುವ ಸರಕಾರೇತರ ಸಂಸ್ಥೆಗಳ ಸಮೀಕ್ಷೆ ಪ್ರಕ್ರಿಯೆಗಳು ಇನ್ನು ಮುಂದೆ ಗ್ರಾಮೀಣ ಭಾಗಕ್ಕೂ ವಿಸ್ತರಣೆ ಆಗಬೇಕಾದರೆ ಹಳೆಯ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಮಾತನಾಡಿ ಸರ್ವರ ಸಹಕಾರ ಕೋರಿದರು. ಸಂಘದ ಉಪಾಧ್ಯಕ್ಷ ವಿ.ವಿ.ತುಳಸಿಗೇರಿ, ನಿರ್ದೇಶಕ ಎಂ.ಸಿ.ಗೊಂದಿ, ಪ್ರೊ.ಬಸವರಾಜ ಗಲಗಲಿ ವೇದಿಕೆಯಲ್ಲಿದ್ದರು.ಹಳೆಯ ವಿದ್ಯಾರ್ಥಿಗಳಾದ ಜಿ.ಎನ್. ಮಳಗುಂಡಿ, ಪ್ರೊ.ಬಿ.ಕೆ.ಕೊಣ್ಣೂರ, ಎಲ್.ಕೆ.ಗವಿಮಠ, ವಿಜಯ ಜೈನ, ನಿವೃತ್ತ ಪ್ರಾಧ್ಯಾಪಕ ಪಿ.ಬಿ.ಪಾಟೀಲ, ಕೆ.ಜಿ.ತೆಲಬಕ್ಕನವರ ತಮ್ಮ ಅನಿಸಿಕೆ ಹಂಚಿಕೊಂಡರು.ಪ್ರೊ.ಎ.ಎಲ್.ಕಡಕೋಳ ಪ್ರಾರ್ಥನೆ ಗೀತೆ ಹಾಡಿದರು. ಸಂಘದ ಅಧ್ಯಕ್ಷ ಪ್ರೊ.ಬಸವರಾಜ ಕಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಟಿ.ಪಿ.ಗಿರಡ್ಡಿ ನಿರೂಪಿಸಿದರು. ನಿರ್ದೇಶಕ ಪ್ರೊ.ವಿ.ಜೆ.ಕಾಡದೇವರ ವಂದಿಸಿದರು.ಸಂಘದ ಪದಾಧಿಕಾರಿಗಳು

ಸ್ಥಳೀಯ ಬಿಎಲ್‌ಡಿಇಎ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಮುಂದಿನ ಅವಧಿಗಾಗಿ ಈಗಿರುವ ಪದಾಧಿಕಾರಿಗಳನ್ನೇ ಮುಂದುವರಿಸಲು ಸಭೆಯಲ್ಲಿ ನಿರ್ಣಯ ಕೈಕೊಳ್ಳ ಲಾಯಿತು.ಪ್ರೊ.ಬಸವರಾಜ ಕಡ್ಡಿ (ಅಧ್ಯಕ್ಷ), ವಿ.ವಿ.ತುಳಸಿಗೇರಿ (ಉಪಾಧ್ಯಕ್ಷ), ಡಾ.ಟಿ.ಪಿ.ಗಿರಡ್ಡಿ (ಪ್ರಧಾನ ಕಾರ್ಯದರ್ಶಿ), ಪ್ರೊ.ಎ.ಎಲ್.ಕಡಕೋಳ (ಕಾರ್ಯದರ್ಶಿ), ಎಸ್.ಕೆ.ಬಾದರದಿನ್ನಿ(ಖಜಾಂಚಿ).ನಿವೃತ್ತ ಎಸ್ಪಿ ಎಸ್.ಎಂ.ಮಂಟೂರ, ನಿವೃತ್ತ ಎಸ್ಪಿ ಎಲ್.ಬಿ.ಶಿರಗುಪ್ಪಿ, ನಿವೃತ್ತ ಡಿವೈಎಸ್ಪಿ ಪಿ.ಎನ್.ಪಾಟೀಲ, ಸಂಪಾದಕ ಎಂ.ಸಿ.ಗೊಂದಿ, ಎಂಎಲ್‌ಸಿ ಜಿ.ಎಸ್.ನ್ಯಾಮಗೌಡ, ಪ್ರೊ.ಪಿ.ಬಿ.ಪಾಟೀಲ, ಎಂ.ಕೆ.ನ್ಯಾಮಗೌಡ, ಆರ್.ಎಂ.ಮುತ್ತೂರ, ಸಿ.ಎಸ್.ಪಾಟೀಲ, ಉತ್ತಮ ಪೋರವಾಲ, ಪ್ರೊ.ಎಂ.ಸಿ.ಕಾರಭಾರಿ, ಪ್ರೊ.ವಿ.ಜೆ.ಕಾಡದೇವರ, ಲೆಕ್ಕಪರಿಶೋಧಕ ಜಿ.ಬಿ.ಬಾಂಗಿ, ರಾಜಶೇಖರ ಕೋವಳ್ಳಿ, ಸ್ತ್ರೀ-ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ತುಂಗಳ (ಎಲ್ಲರೂ ನಿರ್ದೇಶಕರು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry