ಬುಧವಾರ, ನವೆಂಬರ್ 13, 2019
22 °C

`ಕಲಿಯುತ್ತಿರುವ ಸಮಾಜ ನಿರ್ಮಾಣ'

Published:
Updated:

ಕನಕಗಿರಿ:  ರಾಜ್ಯದಲ್ಲಿ `ಕಲಿಯುತ್ತಿರುವ ಸಮಾಜ' ನಿರ್ಮಾಣ ಮಾಡುವ ಉದ್ದೇಶ ರೈಸ್ ಪೌಂಡೇಶನ್ ಸಂಸ್ಥೆ ಹೊಂದಿದೆ ಎಂದು ರೈಸ್ ಪೌಂಡೇಶನ್ ಮುಖ್ಯಸ್ಥ ಜಿ. ಅಚುತರಾವ್ ತಿಳಿಸಿದರು.ಇಲ್ಲಿನ ಮಾದರಿ ಲೋಕ ಶಿಕ್ಷಣ ಕೇಂದ್ರಕ್ಕೆ ಈಚೆಗೆ ಭೇಟಿ ನೀಡಿದ ಸಮಯದಲ್ಲಿ ಅವರು `ಪ್ರಜಾವಾಣಿ' ಜತೆಗೆ ಮಾತನಾಡಿದರು.

ರಾಜ್ಯದಲ್ಲಿ 1666 ಮಾದರಿ ಶಿಕ್ಷಣ ಕೇಂದ್ರಗಳಿವೆ, ಚಾಮರಾಜನಗರ, ಕೊಪ್ಪಳ ಜಿಲ್ಲೆಯ ಇಂಥ ಕೇಂದ್ರಗಳಿಗೆ ಭೇಟಿ ನೀಡಿ ವಿವಿಧ ಮಾಹಿತಿ ಸಂಗ್ರಹಿಸಿ ಕೇಂದ್ರಗಳಿಗೆ ಉತ್ತೇಜನ ನೀಡುವ ಮತ್ತು ಬೇಕಾದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡುತ್ತಿರುವುದಾಗಿ ಅವರು ಹೇಳಿದರು.ನವ ಸಾಕ್ಷರರರು ಗ್ರಾಮ ಪಂಚಾಯಿತಿ, ಬ್ಯಾಂಕ್, ರೈತ ಸಂಪರ್ಕ ಕೇಂದ್ರಗಳಿಂದ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು. ಜಿಲ್ಲೆಯ ಮೆಣೆದಾಳ, ಹಿರೇವಂಕಲಕುಂಟಿ, ಹಿರೇ ಸಿಂದೋಗಿ, ಕನಕಗಿರಿ ಮಾದರಿ ಕೇಂದ್ರಗಳು ಕೈಗೊಂಡ ಕೆಲಸಗಳ ಕುರಿತು ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರಕ್ಕೆ ಎಪ್ರಿಲ್ 20ರೊಳಗೆ ವರದಿ ಸಲ್ಲಿಸಲಾಗುವುದು ಎಂದರು. ವರದಿ ಆಧಾರಿಸಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಎಂದರು.ಸಹ ಸಂಶೋಧಕ ಸತ್ಯ ನಾರಾಯಣ, ಹೆಗಡೆ, ಕಾರ್ಯಕ್ರಮ ಅಧಿಕಾರಿ ಸೋಮಶೇಖರ ತುಪ್ಪದ, ತಾಲ್ಲೂಕು ಸಂಯೋಜಕ ರಾಮಣ್ಣ, ಮುಖ್ಯ ಪ್ರೇರಕ ಶಾಮೀದಸಾಬ ಲೈನದಾರ, ಸಹ ಪ್ರೇರಕಿ ಪದ್ಮಾವತಿ ಡಂಕನಕಲ್ ಇದ್ದರು.

ಪ್ರತಿಕ್ರಿಯಿಸಿ (+)