ಶುಕ್ರವಾರ, ಮಾರ್ಚ್ 5, 2021
27 °C

ಕಲಿಯುವ ಮನ ರಾಮನವಮಿಯ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಿಯುವ ಮನ ರಾಮನವಮಿಯ ದಿನ

ಕಾಲೇಜು ಕ್ಯಾಂಪಸ್‌ನಲ್ಲೆಲ್ಲಾ ಮಜ್ಜಿಗೆ ತುಂಬಿದ ಕೊಳಗಗಳು, ಕೋಸಂಬರಿ ಸುವಾಸನೆ. ಪಾನಕ ಹೀರುತ್ತಿದ್ದ ವಿದ್ಯಾರ್ಥಿಗಳಲ್ಲಿ ಒಂದು ರೀತಿ ವಿಭಿನ್ನ ಅನುಭವ ಕಂಡ ಸಂತಸ.ಕಾಲೇಜುಗಳಲ್ಲಿ ವಾರ್ಷಿಕೋತ್ಸವ, ಮನರಂಜನಾ ಕಾರ್ಯಕ್ರಮಗಳು ಮಾಮೂಲಿ. ಆದರೆ ಆಚಾರ್ಯ ಕಾಲೇಜಿನಲ್ಲಿ ವಿಭಿನ್ನವಾದ ಆಚರಣೆಯೊಂದು ಇತ್ತೀಚೆಗೆ ಜರುಗಿತು. ರಾಮನವಮಿ ಅಂಗವಾಗಿ ಇಡೀ ಕಾಲೇಜಿನ ವಿದ್ಯಾರ್ಥಿಗಳೆಲ್ಲಾ ಒಗ್ಗೂಡಿದ್ದು ಕಾಲೇಜಿಗೇ ಹಬ್ಬದ ಕಳೆ ತಂದಿತ್ತು.ರಾಮನವಮಿ ಉತ್ಸವ ನಡೆದಿದ್ದು ನಗರದ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸಂಸ್ಥೆಯಲ್ಲಿ. ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ರೂವಾರಿಯಾಗಿದ್ದರು.ಕಾಲೇಜಿನ ಎಲ್ಲಾ ವಿಭಾಗದ ಸುಮಾರು 200 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡಿದ್ದರು.ಸಂಸ್ಥೆಯ ಪ್ರಾಂಶುಪಾಲ ಪ್ರೊ. ಗುರುನಾಥ್ ರಾವ್ ವೈದ್ಯ, ಬ್ರಹ್ಮಂ, ಮತ್ತು ಎಲ್ಲಾ ವಿಭಾಗದ ಪ್ರಾಧ್ಯಾಪಕರು ಈ ಉತ್ಸವದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

 

ರಾಮನವಮಿ ವಿಶೇಷ ನಿಂಬೆ ಪಾನಕ, ಕೋಸಂಬರಿ, ಮಜ್ಜಿಗೆಯನ್ನು ಎಲ್ಲರಿಗೂ ವಿತರಿಸಲಾಯಿತು. ಈ ಬಿರು ಬೇಸಿಗೆಯಲ್ಲಿ ಹಿತವೆನಿಸುವ ಮಜ್ಜಿಗೆ, ಕೋಸಂಬರಿಯನ್ನು ಮತ್ತೆ ಮತ್ತೆ ಕೇಳಿ ಪಡೆಯುತ್ತಿದ್ದರು. ಈ ಆಚರಣೆ ಒಂದು ರೀತಿ ವಿಭಿನ್ನ ಅನುಭವ ನೀಡಿತು, ಕೋಸಂಬರಿ, ಮಜ್ಜಿಗೆ, ಪಾನಕ ಎಲ್ಲವೂ ರುಚಿಕಟ್ಟಾಗಿತ್ತು. ಜೊತೆಗೆ ಎಲ್ಲಾ ವಿದ್ಯಾರ್ಥಿಗಳೂ ಒಗ್ಗೂಡಿ ನಡೆಸಿದ ಈ ಕಾರ್ಯಕ್ರಮವಂತೂ ಇದು ಕಾಲೇಜು ಎಂಬುದನ್ನೇ ಒಂದು ಕ್ಷಣ ಮರೆಸಿತು ಎಂದು ಸಂತಸದಿಂದ ನುಡಿದರು ಎಂ.ಎಸ್. ವಿದ್ಯಾರ್ಥಿನಿ ಮಾನಸ.`ರಾಮನವಮಿಗೆಂದು ಒಂದು ದಿನದ ಹಿಂದಷ್ಟೇ ತಯಾರಿ ನಡೆಸಿದೆವು. ಉತ್ಸವ ತುಂಬಾ ಚೆನ್ನಾಗಿ ನಡೆಯಿತು. ನಮ್ಮ ಸಂಸ್ಕೃತಿ ಉಳಿಸುವ ಇಂತಹ ಹಬ್ಬಗಳ ಅವಶ್ಯಕತೆ ತುಂಬಾ ಇದೆ. ನಮ್ಮ ಈ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ನಿಜಕ್ಕೂ ಸಂತಸ ತಂದಿದೆ~ ಎಂದರು ಸ್ನಾತಕೋತ್ತರ ವಿದ್ಯಾರ್ಥಿ ಪ್ರಶಾಂತ್.ಪುರಾಣ ಪುರುಷ ರಾಮ ಎಲ್ಲರಿಗೂ ಸ್ಫೂರ್ತಿ. ಆದ್ದರಿಂದ ರಾಮನನ್ನು, ಆತನ ತತ್ವಗಳನ್ನು ನೆನೆಸಿಕೊಳ್ಳುವ ಈ ಆಚರಣೆ ನಮ್ಮ ಕಾಲೇಜಿನಲ್ಲಿ ನಡೆದಿದ್ದು ಸಂತಸ ತಂದಿದೆ. ಪ್ರತಿ ವರ್ಷವೂ ಆಚರಣೆ ಹೀಗೆ ಮುಂದುವರೆಯಲಿ ಎಂಬುದು ನನ್ನ ಆಶಯ ಎಂದವರು ಎಂಎಸ್ ವಿದ್ಯಾರ್ಥಿನಿ ಶ್ರೀದೇವಿ ಎಸ್.ಒಟ್ಟಿನಲ್ಲಿ ಮಿನಿ ರಾಮರಾಜ್ಯವಾದಂತಿದ್ದ ಕಾಲೇಜು ತುಂಬೆಲ್ಲಾ ಅಂದು ರಾಮನವಮಿಯದ್ದೇ ಮಾತು ತುಂಬಿಕೊಂಡಿದ್ದು ವಿಶೇಷವೆನಿಸಿತ್ತು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.