ಶನಿವಾರ, ಮಾರ್ಚ್ 6, 2021
19 °C

ಕಲಿಯೋಣ ಬನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಿಯೋಣ ಬನ್ನಿ

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಈ ಕಾಲದ ಮಕ್ಕಳ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ತಂದೆ ಅಥವಾ ತಾಯಿಯ ಮೊಬೈಲ್ ಫೋನ್ ಅಥವಾ ಟ್ಯಾಬ್‌ಗಳು ಹೆಚ್ಚು ಬಳಕೆಯಾಗುವುದು ಮಕ್ಕಳ ಕೈಯಲ್ಲಿ. ಕಂಪ್ಯೂಟರ್ ಆದಿಯಾಗಿ ಮನೆಯಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳ ನಿಜ ಮಾಲೀಕತ್ವ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳದ್ದೇ ಆಗಿರುತ್ತದೆ.ಈ ಹಿನ್ನೆಲೆಯಲ್ಲಿ ಮಕ್ಕಳ ಬೆಳವಣಿಗೆಗೆ ಇದು ಪೂರಕವೇ ಅಥವಾ ಮಾರಕವೇ ಎಂಬ ಚರ್ಚೆ ಚಾಲನೆಯಲ್ಲಿದೆ. ಇದು ಕೇವಲ ತಂತ್ರಜ್ಞಾನದ ಜೊತೆಗಿನ ಸಂಬಂಧವಷ್ಟೇ ಅಲ್ಲ. ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಸಿಕ್ಕಿರುವ ಸಾಮಾಜಿಕ ಮಾಧ್ಯಮಗಳಂಥ ಹೊಸ ಸಂಪರ್ಕ ಮಾಧ್ಯಮಗಳ ಕುರಿತೂ ಈ ಚರ್ಚೆ ಮುಂದುವರಿಯುತ್ತಿದೆ. ಸಂಬಂಧಗಳನ್ನು ಮಕ್ಕಳು ಗ್ರಹಿಸುವ ಮತ್ತು ಅವುಗಳನ್ನು ಕಟ್ಟಿಕೊಳ್ಳುವ ಬಗೆ ಹೇಗೆ ಎಂಬುದರ ಕುರಿತು ಹೊಸ ಜ್ಞಾನ ಶಾಖೆಗಳೇ ಸೃಷ್ಟಿಯಾಗಿವೆ.ಮೇಲು ನೋಟಕ್ಕೆ ಬಹಳ ಸರಳವಾಗಿ ಕಾಣಿಸುವ ಈ ಎಲ್ಲಾ ಬೆಳವಣಿಗೆಗಳನ್ನು ಒಟ್ಟಾಗಿ ಗ್ರಹಿಸಿ ಅರ್ಥ ಮಾಡಿಕೊಳ್ಳುವುದು ಎಲ್ಲರಿಗೂ ಕಷ್ಟ ಎನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನೂ ತಂತ್ರಜ್ಞಾನವನ್ನೂ ಮತ್ತು ಅದರ ಪರಿಣಾಮವನ್ನು ಗ್ರಹಿಸಿ ಪ್ರತಿಕ್ರಿಯಿಸುವುದಕ್ಕೆ ಅಗತ್ಯವಿರುವ ಕೋರ್ಸ್ ಒಂದನ್ನು ‘ದ ಓಪನ್ ಯೂನಿವರ್ಸಿಟಿ’ ರೂಪಿಸಿದೆ.

ಯಾವುದೇ ಶುಲ್ಕವಿಲ್ಲದ ಈ ಕೋರ್ಸ್ ಹೊಸ ಕಾಲದ ಎಲ್ಲಾ ಪಾಲಕರಿಗೂ ಅಗತ್ಯ. ತಂತ್ರಜ್ಞಾನದ ಪರಿಣಾಮಗಳ ಕುರಿತ ವೈಜ್ಞಾನಿಕ ಅರಿವು ಅವರ ಮಕ್ಕಳ ಬೆಳವಣಿಗೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಈ ಕೋರ್ಸ್ ಫೆಬ್ರುವರಿ ಒಂದರಿಂದ ಆರಂಭವಾಗಲಿದೆ. ಇದಕ್ಕೆ ಸೇರುವುದಕ್ಕಾಗಿ ಈ ಕೊಂಡಿಯನ್ನು ಬಳಸಬಹುದು: https://goo.gl/8DBNT5

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.