ಕಲುಷಿತ ನೀರು ಪೂರೈಕೆ ವಿರುದ್ಧ ಪ್ರತಿಭಟನೆ

7

ಕಲುಷಿತ ನೀರು ಪೂರೈಕೆ ವಿರುದ್ಧ ಪ್ರತಿಭಟನೆ

Published:
Updated:

ಬಳ್ಳಾರಿ: ಸ್ಥಳೀಯ ಸತ್ಯನಾರಾಯಣ ಪೇಟೆಯ ವಿವಿಧೆಡೆ ಕೆಲವು ದಿನಗಳಿಂದ ಮಹಾನಗರ ಪಾಲಿಕೆ ಪೂರೈಸುತ್ತಿರುವ ಕುಡಿಯುವ ನೀರಿನ ಜತೆಗೆ ಕಲುಷಿತವಾದ, ಒಳಚರಂಡಿ  ನೀರು ಸರಬರಾಜಾ ಗುತ್ತಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ದಿಢೀರ್ ರಸ್ತೆಗಿಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.ಸತ್ಯನಾರಾಯಣ ಪೇಟೆಯ ಸುಂಕಲಮ್ಮ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಅನೇಕ ತಿಂಗಳಿನಿಂದ ಪೂರೈಕೆ ಆಗುತ್ತಿರುವ ಕುಡಿಯುವ ನೀರು ದುರ್ವಾಸನೆಯಿಂದ ಕೂಡಿದ್ದು, ಈ  ಕುರಿತು ಪೌರಾಯುಕ್ತರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ಸತ್ಯನಾರಾಯಣ ಪೇಟೆಯ 2ನೇ ಅಡ್ಡ ರಸ್ತೆಯ ನಿವಾಸಿಗಳು ಕುಡಿಯುವ ನೀರು, ವಿದ್ಯುತ್, ಮನೆ ಕಂದಾಯ ಕಟ್ಟುತ್ತಿದ್ದರೂ ಈ ಭಾಗದ ಜನರಿಗೆ ಮಾತ್ರ  ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಅಲ್ಲದೆ, ಒಳಚರಂಡಿಗಳೆಲ್ಲ ಕಟ್ಟಿಕೊಂಡು ಮನೆಗಳಲ್ಲಿ ದುರ್ವಾಸನೆ ಹರಡುತ್ತಿದೆ ಎಂದು ಮಹಿಳೆಯರು ಆರೋಪಿಸಿದರು.ಎಸ್.ಎನ್. ಪೇಟೆಯ ಸುಂಕಲಮ್ಮ ದೇವಸ್ಥಾನದ 2ನೇ ಅಡ್ಡರಸ್ತೆ ಸೇರಿದಂತೆ ಇತರ ಭಾಗದಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರಲ್ಲದೆ, ಕುಡಿಯುವ ನೀರು ಪೂರೈಕೆಯ ನೂತನ ಪೈಪ್‌ಲೈನ್ ಅಳವಡಿಸಬೇಕು ಎಂದು ಕೋರಿದರು.ಪಾಲಿಕೆ ಸದಸ್ಯ ದಿವಾಕರ್ ಸ್ಥಳಕ್ಕೆ ಭೇಟಿ ಭೇಟಿ ನೀಡಿ, ಸಮಸ್ಯೆ ನಿವಾರಣೆಯ ಭರವಸೆ ನೀಡಿದರು. ಕಲುಷಿತ ನೀರು ಪೂರೈಕೆ ಆಗುತ್ತಿರುವುದನ್ನು ಪ್ರತಿಭಟನಾಕರರು ಪ್ರದರ್ಶಿಸಿದರು.ಹನುಮಂತ ರೆಡ್ಡಿ, ಪ್ರಭಂಜನ ದಾಸ, ಮೂರ್ತಿ, ಶೇಷಗಿರಿರಾವ್, ಧನ್ವಂತರಿ ಮಾನವಿ, ಡಾ.ಮರಿಸ್ವಾಮಿ, ಕಲ್ಲುಕಂಬ ಸುಧೀಂದ್ರ, ರೇಣುಕಾ, ಸುಮಾಬಾಯಿ, ಅನುಪಮಾ, ಲಕ್ಷ್ಮಿ, ದಿಗ್ಗಾವಿ ಉಮಾ, ಅನುರಾಧಾ, ವಿಜಯಪ್ರಕಾಶ್, ನಂದಾ, ವಾಣಿ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry