ಕಲೆಯ ಬಲೆ

7

ಕಲೆಯ ಬಲೆ

Published:
Updated:

ದೇಶದ ದಕ್ಷಿಣ ತುದಿಯ ತಮಿಳುನಾಡು ಕಲೆಗಳ ಆಗರ. ಕರ್ನಾಟಕ ಸಂಗೀತ, ಭರತನಾಟ್ಯ, ರಾಜ್ಯದ ತುಂಬೆಲ್ಲ ಹರಡಿರುವ ದೇವಸ್ಥಾನಗಳು, ಅವುಗಳ ವಾಸ್ತುಶಿಲ್ಪ ವೈಭವ ಎಂಥ ಅರಸಿಕರಲ್ಲೂ ಕಲಾಪ್ರೇಮ ಮೂಡಿಸುತ್ತದೆ.ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮ ‘ಪೂಂಪುಹಾರ್’ ಈಗ ನಗರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಿದೆ. ತಮಿಳುನಾಡಿನ ವಿವಿಧ ಭಾಗಗಳ ಕರಕುಶಲ ವಸ್ತುಗಳ ಭಂಡಾರವೇ ಇಲ್ಲಿದೆ. ಇದಲ್ಲದೇ ತಂಜಾವೂರ್ ಕಲಾಕೃತಿಗಳು, ಲೋಹಕಾರರ ಕಂಚಿನ ಕಲಾಕೃತಿಗಳು, ದೀಪಗಳು ಮನಸೆಳೆಯುವಂತಿವೆ. ಇದರ ಹೊರತಾಗಿ ದೇಶದ ಇತರ ಭಾಗಗಳ ಕರಕುಶಲ ವಸ್ತುಗಳು, ವಸ್ತ್ರಗಳು ಇಲ್ಲಿ ಮಾರಾಟಕ್ಕಿವೆ.ಪ್ರದರ್ಶನ ಗುರುವಾರ ಮುಕ್ತಾಯಗೊಳ್ಳಲಿದೆ.ಸ್ಥಳ: ಶ್ರೀನಿವಾಸ ಸಾಗರ ಕಲ್ಯಾಣ ಮಂಟಪ, 2 ನೇ ಬ್ಲಾಕ್, ಜಯನಗರ, ಅಶೋಕ ಪಿಲ್ಲರ್ ಬಳಿ. ಬೆಳಿಗ್ಗೆ 11 ರಿಂದ ರಾತ್ರಿ 9.   g

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry