ಕಲೆ ಒಲವು ಕಡಿಮೆ: ಮಾಲತಿ ವಿಷಾದ

ಸೋಮವಾರ, ಮೇ 20, 2019
30 °C

ಕಲೆ ಒಲವು ಕಡಿಮೆ: ಮಾಲತಿ ವಿಷಾದ

Published:
Updated:

ಮೈಸೂರು: ಪ್ರಸ್ತುತ ದಿನಗಳಲ್ಲಿ ಜನರಿಗೆ ಕಲೆ ಮೇಲಿನ ಒಲವು ಕಡಿಮೆ ಯಾಗುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಹೇಳಿದರು.ನಗರದ ಜಗನ್ಮೋಹನ ಅರಮನೆ ಯಲ್ಲಿ ಅಮರ ಕಲಾ ಸಂಘ ಏರ್ಪಡಿಸಿದ್ದ ಪರ್ವತವಾಣಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಎಚ್.ಎಸ್.ಉಮೇಶ್ ಅವರ `ಪರ್ವತ ಪಂಥನ~ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಮನೆಗೆ ಮನರಂಜನೆ ತಲುಪುತ್ತಿರುವ ಹಿನ್ನೆಲೆಯಲ್ಲಿ ರಂಗಭೂಮಿಯತ್ತ ಜನರು ಬರುವುದು ಕಡಿಮೆಯಾಗಿದೆ ಎಂದು ಹೇಳಿದರು.ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, ಕೈಲಾಸಂ ನಾಟಕಗಳ ಯಶಸ್ವಿ ಪ್ರದರ್ಶನದಿಂದ ಪ್ರಭಾವಿತರಾಗಿ ಪರ್ವತವಾಣಿ ಅವರು 80ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು. ಆದರೆ ಕನ್ನಡ ರಂಗಭೂಮಿ ವಿಮರ್ಶಕರು ಗುರುತಿಸಲಿಲ್ಲ. ಪರ್ವತವಾಣಿ ಒಬ್ಬ ನಾಟಕಕಾರ, ನಿರ್ದೇಶಕ, ಮಾತುಗಾರ, ರಂಗ ಚಿಂತಕ, ಮಾನವೀಯತೆಯುಳ್ಳ ಮನುಷ್ಯ ಎಂದು ಅಭಿಪ್ರಾಯಪಟ್ಟರು.

 

ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ರಾಗೌ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಸದಸ್ಯ ನಾ.ನಾಗಚಂದ್ರ, ಅಮರ ಕಲಾ ಸಂಘ ಕಾರ್ಯದರ್ಶಿ ರಾಘವೇಂದ್ರ ಹಾಜರಿದ್ದರು. ರಂಗಕರ್ಮಿ ರಾಜಶೇಖರ ಕದಂಬ ನಿರೂಪಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry