ಕಲೈಞ್ಙರ್ ವಾಹಿನಿ ಮೇಲೆ ಸಿಬಿಐ ದಾಳಿ

7

ಕಲೈಞ್ಙರ್ ವಾಹಿನಿ ಮೇಲೆ ಸಿಬಿಐ ದಾಳಿ

Published:
Updated:

ಚೆನ್ನೈ (ಪಿಟಿಐ/ಐಎಎನ್ಎಸ್): ಡಿಎಂಕೆ ಪಕ್ಷದ ವಾಹಿನಿ ಕಲೈಞ್ಙರ್ ಟಿ.ವಿ ವಾಹಿನಿಯ ಕಚೇರಿ ಸೇರಿದಂತೆ ಉನ್ನತ ಅಧಿಕಾರಿಗಳ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

2007-08ರಲ್ಲಿ ನಡೆದ 2ಜಿ- ತರಂಗಾಂತರ ಹಂಚಿಕೆಗೂ ತಮಗೂ ಯಾವುದೇ ನಂಟು ಇಲ್ಲ ಹಾಗೂ ಯಾವುದೇ ತನಿಖೆಗೂ ಸಿದ್ದ ಎಂದು ವಾಹಿನಿ ಹೇಳಿದ ಎರಡು ದಿನಗಳ ನಂತರ ಸಿಬಿಐ ತನ್ನ ದಾಳಿ ಆರಂಭಿಸಿದೆ.

2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತರಾಗಿರುವ ಸ್ವಾನ್ ಟೆಲಿಕಾಂನ ಸ್ಥಾಪಕ ಶಾಹಿದ್ ಉಸ್ಮಾನ್ ಬಲ್ವಾನೊಂದಿಗೆ ಕಲೈಞ್ಙರ್ ವಾಹಿನಿ ಸಂಪರ್ಕ ಹೊಂದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಈ ದಾಳಿ ನಡೆಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರಿ ಹಾಗೂ ಕಲೈಞ್ಙರ್ ಟಿವಿ ವಾಹಿನಿ ಹೊಂದಿರುವ ಕಂಪೆನಿಯ ಪ್ರವರ್ತಕರಲ್ಲಿ ಒಬ್ಬರಾದ ಕನಿಮೋಳಿ ಅವರು ಸಿಬಿಐ ದಾಳಿಗೆ ಸಂಬಂಧಿಸಿದಂತೆ ತಮಗೇನು ತಿಳಿಯದು ಎಂದು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry