ಕಲ್ಮಾಡಿ ಹೇಳಿಕೆಗೆ ಅಜಯ್ ಮಾಕನ್ ತಿರುಗೇಟು

ಮಂಗಳವಾರ, ಜೂಲೈ 23, 2019
20 °C

ಕಲ್ಮಾಡಿ ಹೇಳಿಕೆಗೆ ಅಜಯ್ ಮಾಕನ್ ತಿರುಗೇಟು

Published:
Updated:

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್‌ಗೆ ಭಾರತ ಒಲಿಂಪಿಕ್ ಸಂಸ್ಥೆ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ತೆರಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಈಗಲೂ ನನ್ನ ನಿಲುವಿಗೆ  ಬದ್ಧ~ ಎಂದು ಪುನರುಚ್ಚರಿಸಿದ್ದಾರೆ. ಅಷ್ಟೇ ಅಲ್ಲ ಕಲ್ಮಾಡಿ ನನ್ನ ರಾಜೀನಾಮೆ ಕೇಳಿರುವುದು ಅಸಂಬದ್ಧ ಎಂದು ತಿರುಗೇಟು ನೀಡಿದ್ದಾರೆ.`ಲಂಡನ್‌ಗೆ ತೆರಳಲು ನ್ಯಾಯಾಲಯವೇ ಅನುಮತಿ ನೀಡಿದೆ. ನನ್ನನ್ನು ತಡೆಯಲು ಮಾಕನ್ ಯಾರು. ನನ್ನ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ~ ಎಂದು ಕಲ್ಮಾಡಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದರು.`ಕಲ್ಮಾಡಿ ವಿಷಯವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ ಬಳಿ ಮಾತನಾಡುತ್ತೇನೆ. ನಿನ್ನ ಮೇಲಿರುವ ಆರೋಪಗಳಿಂದ ಮುಕ್ತವಾಗುವ ತನಕ ಹೋಗದಿರುವಂತೆ ಕಲ್ಮಾಡಿಗೆ ಸಲಹೆ ನೀಡುತ್ತೇನೆ~ ಎಂದು ಮಾಕನ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry