ಸೋಮವಾರ, ಜುಲೈ 26, 2021
21 °C

ಕಲ್ಯಾಣಿಗೆ ಕಾಯಕಲ್ಪಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಯಿಂದ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮಣ್ಣಿನಲ್ಲಿ ಹೂತುಹೋಗಿರುವ ಕಲ್ಯಾಣಿಯ ಉತ್ಖನನ ನಡೆಸಲು ನಿರ್ಧರಿಸಲಾಗಿದೆ.ಚಾಮರಾಜ ಒಡೆಯರ್ ಅವರ ನೆನಪಿಗಾಗಿ ಕ್ರಿ.ಶ. 1826ರಲ್ಲಿ ಈ ಕಲ್ಯಾಣಿ ನಿರ್ಮಿಸಲಾಗಿದೆ. 80 ಅಡಿ ಅಗಲ ಮತ್ತು 80 ಉದ್ದದ ಕಲ್ಯಾಣಿಯ ಉತ್ಖನನ ಕಾರ್ಯವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ.ಜೂನ್‌ನಲ್ಲಿ ಉತ್ಖನನ ಆರಂಭಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ನಾಗರಿಕರು ಓಡಾಡುವ ಸ್ಥಳದಲ್ಲಿಯೇ ಕಲ್ಯಾಣಿ ಹೂತುಹೋಗಿರುವ ಕುರಿತು ದೇಗುಲದ ಚರಿತ್ರೆಯಲ್ಲಿ ದಾಖಲಾಗಿದೆ.

ಆದರೆ, ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲು ನಿರ್ಧರಿಸಿರುವ ಈ ಕಾರ್ಯಕ್ಕೆ ‘ಅಷ್ಟಮಂಗಳ ಪ್ರಶ್ನೆ’ಯೂ ತಳಕು ಹಾಕಿಕೊಂಡಿದೆ. ಜಿಲ್ಲಾ ಕೇಂದ್ರಕ್ಕೆ ಬರುವ ಸಚಿವರು ಮತ್ತು ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೂಢನಂಬಿಕೆ ಹಿನ್ನೆಲೆಯಲ್ಲಿ 2010ರ ಜುಲೈ 13ರಂದು ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆ ಕಾರ್ಯವೂ ನಡೆದಿತ್ತು.ಅಂದು ಕೇರಳದಿಂದ ಆಗಮಿಸಿದ್ದ ಮೂವರು ಜ್ಯೋತಿಷಿಗಳು, ‘ದೇವಸ್ಥಾನದಲ್ಲಿರುವ ವಿಗ್ರಹಗಳು ಭಗ್ನಗೊಂಡಿವೆ. ಕಲ್ಯಾಣಿ ಮಣ್ಣಿನಲ್ಲಿ ಹೂತು ಹೋಗಿದೆ. ನಗರಕ್ಕೆ ಅಂಟಿಕೊಂಡಿರುವ ದೋಷದ ನಿವಾರಣೆಗಾಗಿ ಕಲ್ಯಾಣಿಗೆ ಕಾಯಕಲ್ಪ ನೀಡಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲೇ ಕಲ್ಯಾಣಿಗೆ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ’ ಎನ್ನಲಾಗಿದೆ.30ಲಕ್ಷ ರೂ: ದೇಗುಲದ ಮುಂಭಾಗದಲ್ಲಿ ಕಲ್ಯಾಣಿ ಹೂತುಹೋಗಿರುವ ಬಗ್ಗೆ ದಾಖಲೆ ಇದೆ. ಹೀಗಾಗಿ, ಉತ್ಖನನ ನಡೆಸಲಾಗುವುದು. ಇದಕ್ಕಾಗಿ 30 ಲಕ್ಷ ರೂ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಜೂನ್‌ನಲ್ಲಿ ಉತ್ಖನನಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.