ಮಂಗಳವಾರ, ಅಕ್ಟೋಬರ್ 22, 2019
26 °C

ಕಲ್ಯಾಣ ಕರ್ನಾಟಕ ನಾಮಕರಣಕ್ಕೆ ಆಗ್ರಹ

Published:
Updated:

ಗುಲ್ಬರ್ಗ: ಇಲ್ಲಿಯ ಜನರ ಒತ್ತಾಯದಂತೆ ಸರ್ಕಾರ  ಈ ಭಾಗವನ್ನು ಶೀಘ್ರವೇ `ಕಲ್ಯಾಣ ಕರ್ನಾಟಕ~ ಎಂದು ಘೋಷಿಸಬೇಕು. ಇಲ್ಲದಿದ್ದಲ್ಲಿ ಈ ಪ್ರದೇಶದ ಎಲ್ಲ ಸ್ವಾಮೀಜಿಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಸುಲಫಲ ಮಠದ ಮಹಾಂತ ಶಿವಾಚಾರ್ಯ ಎಚ್ಚರಿಕೆ ನೀಡಿದರು.ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ನಾಮಕರಣಕ್ಕೆ ಆಗ್ರಹಿಸಿ ಕರಪತ್ರ ಜಾಗೃತಿ ಅಭಿಯಾನದಲ್ಲಿ ಅವರು ಕರಪತ್ರ ವಿತರಿಸಿ ಮಾತನಾಡಿದರು.ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಎಚ್.ಕೆ.ಡಿ.ಬಿ. ಅಧ್ಯಕ್ಷ ಅಮರನಾಥ ಪಾಟೀಲ  ಹೇಳಿದರು.

ಕರಪತ್ರ ಜಾಗೃತಿ ಅಭಿಯಾನದಲ್ಲಿ ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯ, ಜಿಡಿಎ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ, ಹಿಂದುಳಿದ ವರ್ಗದ ಮುಖಂಡ ತಿಪ್ಪಣ್ಣಪ್ಪ ಕಮಕನೂರ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶಿವಲಿಂಗ ಹಳಿಮನಿ, ವಿಜಯಕುಮಾರ ಎಂ, ವಿಜಯಕುಮಾರ ತೇಗಲತಿಪ್ಪಿ, ಶಿವಾನಂದ ಸ್ವಾಮಿ, ರ‌್ಯಾವಪ್ಪ ಮರತೂರ, ಎಚ್.ಬಿ. ಲಿಂಗರೆಡ್ಡಿ, ಸುಭಾಷ ಮುಲಗೆ, ಶರಣಬಸಪ್ಪ ಕೂಡಿ, ಸಂಜಯ ಸಮಾಣೆ, ಮಹಾಂತಪ್ಪ ಮಲಕೂಡ, ಬಸವರಾಜ ಬಿರಾದಾರ, ಶರಣು ಶೀಲವಂತ, ಶಿವಕುಮಾರ ಮಾಳದ, ಸತೀಶ ಕಲಶೆಟ್ಟಿ, ರಾಜು ಮಕಲಾಪುರೆ, ಮುಕೇಶ ಹಬೀಬ ಮತ್ತಿತರರು ಭಾಗವಹಿಸಿದ್ದರು.

ಇಂದು, ನಾಳೆ ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ

ಗುಲ್ಬರ್ಗ: ಪ್ರಚಲಿತ ವಿಜ್ಞಾನ ವಿಷಯಗಳು ಮತ್ತು ಮೂಲ ವಿಜ್ಞಾನ ಕುರಿತು ಜಿಲ್ಲೆಯ ವಿದ್ಯಾರ್ಥಿಗಳು ನೇರವಾಗಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ವೇದಿಕೆಯೊಂದನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್,  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಸಹಯೋಗದಲ್ಲಿ ನಿರ್ಮಿಸಿವೆ.ನಗರದ ನಳಂದಾ ವಿಜ್ಞಾನ ಪಿಯು ಕಾಲೇಜಿನಲ್ಲಿ 6ರಂದು ಶುಕ್ರವಾರ ಮತ್ತು ಶನಿವಾರ ಸಂವಾದ ನಡೆಯಲಿದ್ದು, ವಿಜ್ಞಾನಿಗಳಾದ ಡಾ. ಹರೀಶ ಭಟ್, ಡಾ. ತಿಪ್ಪೇಸ್ವಾಮಿ, ಡಾ. ಸಿ.ವಿ. ಏಳುಮಗ್ಗದ್ ಹಾಗೂ ಡಾ. ಮಹಿದರ ಡಿ.ವಿ. ಅವರು ಪ್ರಚಲಿತ ವಿಜ್ಞಾನ ವಿಷಯಗಳು ಮತ್ತು ಮೂಲ ವಿಜ್ಞಾನ ಕುರಿತು ಮೊದಲು ವಿಷಯ ಮಂಡಿಸುವರು.ನಂತರ, ಜಿಲ್ಲೆಯ ಆಯ್ದ 300 ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ತಮ್ಮ ಪ್ರಶ್ನೆಗೆ ಉತ್ತರ ಪಡೆಯುವರು ಎಂದು ಕರಾವಿಪ ಖಜಾಂಚಿ ಗಿರೀಶ ಕಡ್ಲೇವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೂಲ ವಿಜ್ಞಾನಗಳ ಕುರಿತು ಅಧ್ಯಯನ-ಯೋಜನೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷರಾದ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಈ ಕಾರ್ಯಕ್ರಮವನ್ನು ರೂಪಿಸಿದ್ದಾರೆ.ಪದಾಧಿಕಾರಿಗಳ ಆಯ್ಕೆ- ಸೂಚನೆ

ಗುಲ್ಬರ್ಗ: ಕುರುಬರ ಸಂಘ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹಾಗೂ ತಾಲ್ಲೂಕು ನೌಕರರ ಸಂಘದ ಆಳಂದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಜ. 8ರಂದು ಬೆಳಿಗ್ಗೆ 11ಕ್ಕೆ ಆಳಂದ ನಗರದ ಕನಕ ಭವನದಲ್ಲಿ ಹಾಗೂ ಅಫಜಲಪುರ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಜ. 9ರಂದು ಅಫಜಲಪುರ ಪಟ್ಟಣದ ಬಾಗೋಡ ಸಿದ್ದ ದೇವಸ್ಥಾನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿದೆ.ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ ಗುಲ್ಬರ್ಗ ಅಧ್ಯಕ್ಷ ದೇವೇಂದ್ರಪ್ಪ ಮರತೂರ ಅಧ್ಯಕ್ಷತೆಯಲ್ಲಿ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಿ. ಬೆಳಕೇರಿ ತಿಳಿಸಿದ್ದಾರೆ.

8ರಂದು ಸಭೆ

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಮಾಳಿ (ಮಾಲಗಾರ) ಸಮಾಜ ಸೇವಾ ಸಂಘದ ವತಿಯಿಂದ ಜ. 8ರಂದು ಬೆಳಿಗ್ಗೆ 11ಕ್ಕೆ ಸಮಾಜದ ಕಾರ್ಯಾಲಯದಲ್ಲಿ ನಿವೇಶನದಾರರ ಸರ್ವ ಸದಸ್ಯರ ಸಭೆ ಜರುಗಲಿದೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಮಾಲಗಾರ (ಮಾಳಿ) ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಭೆಯೂ ಜರುಗಲಿದೆ. ಸಮಾಜದ ಸದಸ್ಯರು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಅಧ್ಯಕ್ಷ ಕುಪೇಂದ್ರ ಎಸ್.ಧೂಳೆ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)