ಕಲ್ಯಾಣ ಮಂಟಪಕ್ಕೆ ಕನ್ನ: ರೂ ಎರಡು ಲಕ್ಷ ಕಳವು

7

ಕಲ್ಯಾಣ ಮಂಟಪಕ್ಕೆ ಕನ್ನ: ರೂ ಎರಡು ಲಕ್ಷ ಕಳವು

Published:
Updated:

ಬೆಂಗಳೂರು: ಕಲ್ಯಾಣ ಮಂಟಪ ಪ್ರವೇಶಿಸಿದ ದುಷ್ಕರ್ಮಿಗಳು ಅಲ್ಮೇರಾದಲ್ಲಿದ್ದ ಎರಡು ಲಕ್ಷ ರೂಪಾಯಿ ಕಳವು ಮಾಡಿರುವ ಘಟನೆ ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಘಟನೆ ಸಂಬಂಧ ಕಲ್ಯಾಣ ಮಂದಿರದ ವ್ಯವಸ್ಥಾಪಕ ಜಗನ್ನಾಥ್ ದೂರು ನೀಡಿದ್ದು, ಕಲ್ಯಾಣ ಮಂಟಪವನ್ನು ಬಾಡಿಗೆ ನೀಡುವುದಾಗಿ ಐದು ಜನರಿಂದ ಎರಡು ಲಕ್ಷ ರೂಪಾಯಿ ಮುಂಗಡ ಹಣ ಪಡೆದು ಅಲ್ಮೆರಾದಲ್ಲಿ ಇಟ್ಟಿದ್ದೆ.ಮಂಗಳವಾರ ಬೆಳಿಗ್ಗೆ ಕಲ್ಯಾಣ ಮಂಟಪಕ್ಕೆ ಬಂದಾಗ ಅಲ್ಮೆರಾದ ಬಾಗಿಲು ತೆರೆದಿತ್ತು. ಆದರೆ ಅದರಲ್ಲಿ ಹಣವಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry