ಮಂಗಳವಾರ, ಏಪ್ರಿಲ್ 13, 2021
29 °C

ಕಲ್ಲವ್ವ ಚಿಕಿತ್ಸೆಗೆ ಜೆಎಸ್‌ಎಸ್ ನೆರವಿನ ಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿಯ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವ ಅಥ್ಲೀಟ್ ಕಲ್ಲವ್ವ ಸಿಂಧೋಗಿ ನೆರವಿಗೆ ಬಂದಿದ್ದು, ಶನಿವಾರ ಸಂಸ್ಥೆಯ ಕಾರ್ಯದರ್ಶಿ ಡಾ.ನ.ವಜ್ರಕುಮಾರ ಅವರು ಸಿಂಧೋಗಿ ಚಿಕಿತ್ಸೆಗಾಗಿ 1.10 ಲಕ್ಷ ರೂಪಾಯಿಯನ್ನು ಕ್ರೀಡಾ ತರಬೇತುದಾರ ಎಸ್. ಎಸ್.ಅಗಡಿ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಜ್ರಕುಮಾರ, `ಕ್ರೀಡಾಪಟುವಿನ ಸಹಾಯಕ್ಕೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಧಾವಿಸಿವೆ. ಅದರಂತೆಯೇ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಒಟ್ಟು ರೂ 60 ಸಾವಿರ ಹಾಗೂ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರೂ 50 ಸಾವಿರವನ್ನು ನೀಡಿದ್ದು, ಒಟ್ಟು ರೂ 1.10 ಲಕ್ಷ ಹಣವನ್ನು ನೀಡಲಾಗಿದೆ. ಕಲ್ಲವ್ವ ಬೇಗ ಗುಣಮುಖಳಾಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುವೆ~ ಎಂದರು.ಹಣಕಾಸು ಅಧಿಕಾರಿ ಡಾ.ಅಜಿತ ಪ್ರಸಾದ, ಈ ವಿದ್ಯಾರ್ಥಿನಿ ಕ್ರೀಡಾ ಕ್ಷೇತ್ರದಲ್ಲಿ ಮತ್ತೆ ಮಿಂಚಲಿ ಎಂದು ಹಾರೈಸಿದರು.ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿರುವ ಕಲ್ಲವ್ವಳನ್ನು ಭೇಟಿಯಾಗಿದ್ದ ಕ್ರೀಡಾ ತರಬೇತುದಾರರು ಹಾಗೂ ಪಾಲಿಕೆ ಸದಸ್ಯ ಶಿವು ಹಿರೇಮಠ, ಈಗ ಕೂಡಿಸಿದ ಹಣದಲ್ಲಿ ರೂ 25 ಸಾವಿರ ನೀಡಿದ್ದಾರೆ.ಹಂತ ಹಂತವಾಗಿ ಚಿಕಿತ್ಸಾ ವೆಚ್ಚವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಿವು ಹಿರೇಮಠ ತಿಳಿಸಿದ್ದಾರೆ.

ಕಲ್ಲವ್ವ ಬ್ಯಾಂಕ್ ಖಾತೆ ವಿವರ

ಕಲ್ಲವ್ವ ಚಿಕಿತ್ಸೆಗಾಗಿ ಧನಸಹಾಯ ಮಾಡುವುದಿದ್ದರೆ ಕಲ್ಲವ್ವ ಸಿಂಧೋಗಿ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ಶಾಖೆ, ಧಾರವಾಡ, ಖಾತೆ ಸಂಖ್ಯೆ 324026 35971ಗೆ ಹಣವನ್ನು ಜಮಾ ಮಾಡಬಹುದು.ಚೆಕ್ ಮೂಲಕ ನೀಡುವವರಿದ್ದರೆ ಎಸ್.ಎಸ್.ಅಗಡಿ (ವಿದ್ಯಾಗಿರಿಯ ವಿವೇಕಾನಂದ ನಗರದ ಸಂತೋಷ ಅಪಾರ್ಟ್‌ಮೆಂಟ್) ಅವರಿಗೆ ತಲುಪಿಸಬೇಕು. ಅವರ ಮೊಬೈಲ್ ಸಂಖ್ಯೆ 99161 88603.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.