ಗುರುವಾರ , ಜೂಲೈ 9, 2020
23 °C

ಕಲ್ಲು ಕ್ವಾರಿ ಪರವಾನಗಿ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲು ಕ್ವಾರಿ ಪರವಾನಗಿ ರದ್ದು

ಯಾದಗಿರಿ: ನಿಯಮ ಉಲ್ಲಂಘನೆ ಮಾಡಿ ನಡೆಸಲಾಗುತ್ತಿದ್ದ ಸುಮಾರು 18 ಕಲ್ಲು ಕ್ವಾರಿಗಳ ಪರವಾನಗಿ ಯನ್ನು ಜಿಲ್ಲಾಧಿಕಾರಿಗಳು ರದ್ದು ಪಡಿ ಸಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಪೊಲೀಸರ ರಕ್ಷಣೆಯಲ್ಲಿ ಕ್ವಾರಿಗಳ ಸಾಮಗ್ರಿಗಳನ್ನು ತೆರವುಗೊಳಿಸಲಾ ಯಿತು.ನಗರದ ಹೊರವಲಯ, ವರ್ಕ ನಳ್ಳಿ, ಸೈದಾಪುರ ಸೇರಿದಂತೆ ವಿವಿಧೆಡೆ ನಡೆಸಲಾಗುತ್ತಿದ್ದ ಕಲ್ಲು ಗಣಿಗಾರಿಕೆಯ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಹಠಾತ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿ ಕಾರಿ ಡಾ. ಕೆ.ಜಿ. ಜಗದೀಶ ನೇತೃತ್ವದ ಅಧಿಕಾರಿಗಳ ತಂಡ, ನಿಯಮ ಉಲ್ಲಂಘಿಸಿದ 14, ಸರ್ಕಾರಿ ಜಾಗೆಯಲ್ಲಿ ನಡೆಸುತ್ತಿದ್ದ ಎರಡು ಹಾಗೂ ಅವಧಿ ಮುಗಿದಿರುವ ಎರಡು ಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ.ಸುಪ್ರೀಂ ಕೋರ್ಟ್‌ನ ನಿರ್ದೇಶನ ಗಳ ಉಲ್ಲಂಘನೆ ಮಾಡಿರುವ 14 ಕಲ್ಲು ಕ್ವಾರಿಗಳಿಂದ ಸಾರ್ವಜನಿಕರಿಗೆ ಹಾಗೂ ಶಾಲೆ ಮಕ್ಕಳಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ದೂರು ಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಂಡಕ್ಕೆ, ನಿಯಮ ಉಲ್ಲಂಘನೆ ಮಾಡಿ ರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪರವಾನಗಿ ರದ್ದುಗೊಳಿಸಲಾಗಿದೆ.ಸರ್ಕಾರಿ ಜಾಗೆಯಲ್ಲಿ ಎರಡು ಕಲ್ಲು ಕ್ವಾರಿಗಳು ನಡೆಯುತ್ತಿರುವುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೇ ಅವಧಿ ಮುಗಿದಿದ್ದರೂ ಎರಡು ಕ್ವಾರಿಗಳು ಈಗಲೂ ನಡೆ ಯುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.ಬುಧವಾರ ನಗರಸಭೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪೊಲೀಸ ರಕ್ಷಣೆಯಲ್ಲಿ ಕಲ್ಲು ಕ್ವಾರಿಗಳಿಗೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದು, ಯಂತ್ರೋಪಕರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಅಲ್ಲಿರುವ ಜಲ್ಲಿ ಕಲ್ಲನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಲು ಸೂಚಿಸಲಾಗಿದೆ. ಕ್ವಾರಿಗಳಿಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜೆಸ್ಕಾಂಗೆ ಸೂಚನೆ ನೀಡಲಾಗಿದೆ. ಕಲ್ಲು ಕ್ವಾರಿ ಗಳು ನಡೆಯುತ್ತಿದ್ದ ಸ್ಥಳದಲ್ಲಿನ ಕಟ್ಟಡಗಳನ್ನು ತೆರವುಗೊಳಿಸಲಾ ಯಿತು.ನಗರ ಪ್ರದೇಶದಿಂದ 15 ಕಿ.ಮೀ. ಆಚೆಗೆ ಕಲ್ಲು ಕ್ವಾರಿ ನಡೆಸಲು ಸ್ಥಳ ಆಯ್ಕೆ ಮಾಡಿದಲ್ಲಿ ಮುಂದಿನ ದಿನ ಗಳಲ್ಲಿ ಪರವಾನಗಿ ನೀಡಲಾಗುವುದು. ನಗರದ ಹೊರವಲಯದಲ್ಲಿ ನಡೆಯು ತ್ತಿರುವ ಕಲ್ಲು ಕ್ವಾರಿಗಳಿಂದ ಜನರಿಗೆ ತೊಂದರೆ ಆಗುತ್ತಿದ್ದು, ಪರಿಸರಕ್ಕೂ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪರವಾನಗಿ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಲ್ಲು ಕ್ವಾರಿಗಳು ನಡೆಯುತ್ತಿರು ವುದರಿಂದ ಜನರು ಅನುಭವಿಸು ತ್ತಿರುವ ತೊಂದರೆಗಳ ಬಗ್ಗೆ ಕಳೆದ ನವೆಂಬರ್‌ನಲ್ಲಿ ‘ಪ್ರಜಾವಾಣಿ’ ಪತ್ರಿಕೆ ವರದಿ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.