ಕಲ್ಲು ನೆಲದಲ್ಲಿ ಬೆಳೆದ ಹೂಗಳು

7

ಕಲ್ಲು ನೆಲದಲ್ಲಿ ಬೆಳೆದ ಹೂಗಳು

Published:
Updated:

`ಎ ಫಾರ್ ಆಪಲ್, ಬಿ ಫಾರ್ ಬ್ಯಾಟ್...~, `ಅ... ಆ....ಇ... ಈ...~ ಹೊರಬರುತ್ತಿದ್ದ ಮಕ್ಕಳ ದನಿಗೆ ಹೊಸ ಅರ್ಥ. ಸಮೀಪದ ಕಲ್ಲುಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳವರು. ಜಲ್ಲಿಕ್ಲ್ಲಲಿನ ರಾಶಿಗಳ ಮಧ್ಯೆ ನವೆಯುತ್ತಿದ್ದ ಮಕ್ಕಳ ಬಾಲ್ಯಕ್ಕೆ ಅಲ್ಲಿ ಹೊಸ ಬೆಳಕು. ಕಲ್ಲುಗಳ ಸದ್ದು ಹುಟ್ಟಿಸಿದ ಕಷ್ಟದ ನಡುವೆಯೂ ಅವರೆಲ್ಲರೂ ಅಕ್ಷರಾಭ್ಯಾಸ ಮಾಡುತ್ತಿದ್ದಾರೆ.ಈ ಅಪರೂಪದ ಶಾಲೆಯ ಹೆಸರು `ಬ್ಯಾನ್‌ಯನ್ ಸಮುದಾಯ ಶಾಲೆ~. ಬ್ಯಾನ್‌ಯನ್ ಎಂದರೆ ಆಲದಮರವೆಂದರ್ಥ. ಈ ಶಾಲೆಯ ಹೃದಯವೈಶಾಲ್ಯವನ್ನು ಆಲದಮರದ ಸುವಿಶಾಲ ನೆರಳಿಗೆ ಹೋಲಿಸಬಹುದು.ಗಣಿ ಕಾರ್ಮಿಕರ ಸುಮಾರು 90 ಮಕ್ಕಳು ಇಲ್ಲಿ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇಲ್ಲಿರುವುದು ಮೂರು ತರಗತಿಗಳಷ್ಟೆ.ರಾಜ್ಯ ಸರ್ಕಾರದ ಪಠ್ಯಕ್ರಮದ ಅಧಿಕೃತ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನೂ ನೀಡುವುದು ಇಲ್ಲಿನ ವಿಶೇಷತೆ. ಶಿಕ್ಷಣ, ಸಮವಸ್ತ್ರ, ಆಹಾರ ಎಲ್ಲವೂ ಇಲ್ಲಿ ಉಚಿತ.

ಮೂವರು ಶಿಕ್ಷಕರು, ಒಬ್ಬ ಪ್ರಾಂಶುಪಾಲರು, ಮೂವರು ಶಿಕ್ಷಕರು ಮತ್ತು ಹಲವು ಸಿಬ್ಬಂದಿ ತಂತಮ್ಮ ಕೆಲಸದಲ್ಲಿ ತಲ್ಲೀನರು.

 

ಪರಿಸರ ಪ್ರೇಮಿ ಕಟ್ಟಡಅಕ್ಟೋಬರ್, 2010ರಲ್ಲಿ ಪ್ರಾರಂಭವಾದ ಈ ಕಟ್ಟಡ ಹಲವಾರು ವಿಶೇಷತೆಗಳಿಂದ ಕೂಡಿದೆ. ಇದು ಪರಿಸರ ಪ್ರೇಮಿ ಕಟ್ಟಡ. 4400 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಆಸ್ಟ್ರೇಲಿಯಾದ `40ಕೆ ಫೌಂಡೇಶನ್~ನ ಸಹಭಾಗಿತ್ವದೊಂದಿಗೆ ನಿರ್ಮಾಣಗೊಂಡ ಇದರಲ್ಲಿ ಶಾಲೆ, ಗ್ರಂಥಾಲಯವಿದೆ.

 

ಮಕ್ಕಳಿಗೆ ವಾದ್ಯ ಸಂಗೀತ ಹೇಳಿಕೊಡಲಾಗುತ್ತಿದೆ. ಜತೆಗೆ ಕಂಪ್ಯೂಟರ್ ಪ್ರಯೋಗಾಲಯ, ಊಟದ ಕೋಣೆಗಳಿವೆ. ಒಳಾಂಗಣ ಕ್ರೀಡೆಗೂ ಅವಕಾಶವಿದೆ. ಸಾಮಾನ್ಯ ಶಾಲೆಯ ವಾತಾವರಣಕ್ಕಿಂತ ಇದು ವಿಭಿನ್ನ.  ಅಲ್ಲೇ ತೋಡಿದ ಮಣ್ಣಿನಿಂದ ಸುಮಾರು 70,000 ಇಟ್ಟಿಗೆಗಳನ್ನು ರೂಪಿಸಿ, ಅವುಗಳಿಂದ ನಿರ್ಮಿಸಿದ ಈ ಕಟ್ಟಡದಲ್ಲಿ ಸೌರ ವಿದ್ಯುತ್ ಬಳಕೆಯೇ ಹೆಚ್ಚು. ಕಟ್ಟಡದಲ್ಲಿನ ದೊಡ್ಡ ದೊಡ್ಡ ಕಿಟಕಿಗಳು, ವಿಶಾಲ ಪ್ರಾಂಗಣದಿಂದಾಗಿ ಗಾಳಿ- ಬೆಳಕಿಗೆ ಕೊರತೆ ಇಲ್ಲ. ಬಿಸಿಲಲ್ಲೂ ಇಲ್ಲಿ ತಂಪು ವಾತಾವರಣ.ಅನಾಥ ಮಕ್ಕಳಿಗೆ ಆಶ್ರಯಇದೇ ಕಟ್ಟಡದಲ್ಲಿ `ಲಿಟಲ್‌ಹುಡ್ ಚೈಲ್ಡ್ ಹೋಮ್~ ಎಂಬ ಹಾಸ್ಟೆಲ್ ಕೂಡ ಕಾರ್ಯನಿರ್ವಹಿಸುತ್ತಿದೆ. ತಂದೆ-ತಾಯಿ ಪ್ರೀತಿಯಿಂದ ವಂಚಿತರಾದ 19 ಮಕ್ಕಳಿಗೆ ಈ ಮನೆ ಆಶ್ರಯ ಕೊಟ್ಟಿದೆ. ಈಗ ಈ ಮಕ್ಕಳು ಇಲ್ಲಿದ್ದುಕೊಂಡೇ ಸಮೀಪದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.ಅರ್ಧದಲ್ಲಿಯೇ ಶಾಲೆ ಬಿಟ್ಟ ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಇಲ್ಲಿನ `ಟೆಕ್ ಬ್ಯಾನ್‌ಯನ್ ಕೇಂದ್ರ~ದಲ್ಲಿ ಕಂಪ್ಯೂಟರ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.ಜೆನಿ ಕನಸಿನ ಕೂಸು`ಬ್ಯಾನ್‌ಯನ್ ಸಮುದಾಯ ಶಾಲೆ~ಯು ಲವ್‌ಡೇಲ್ ಸಂಸ್ಥೆಯ ಸ್ಥಾಪಕಿ ಜೆನಿ ವರ್ಮಾ ಅವರ ಕನಸಿನ ಕೂಸು. ಚಿಕ್ಕಂದಿನಿಂದಲೇ `ಮಿಶನರೀಸ್ ಆಫ್ ಚಾರಿಟಿ~ ಜೊತೆ ಸೇರಿ ಕೆಲಸ ಮಾಡುವ ಮೂಲಕ ಸಮಾಜಸೇವಾ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದ ಜೆನಿ, ತನ್ನ ತಂದೆ ದಿ. ಗಾಡ್‌ಫ್ರೆಡ್ ಜಯರಾಜ್ ಹಾಕಿಕೊಟ್ಟ ಹಾದಿಯಲ್ಲಿಯೇ ನಡೆದು `ಲವ್‌ಡೇಲ್ ಫೌಂಡೇಶನ್~ ಹುಟ್ಟುಹಾಕಿದರು.

 

ಮಾನವನಿಗೆ ಆಹಾರ ಮತ್ತು ವಸತಿಯೊಂದಿಗೆ ಶಿಕ್ಷಣವೂ ಅಗತ್ಯ ಎಂಬುದನ್ನು ಮನಗಂಡ ಈ ಸಂಸ್ಥೆ ಕರ್ನಾಟಕದ ಹಲವು ಕಲ್ಲುಗಣಿ ಕಾರ್ಮಿಕರು ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದೆ.

 

2001ರಲ್ಲಿ ಆರಂಭವಾದ ಈ ಸರ್ಕಾರೇತರ ಸಂಸ್ಥೆ ಎಲ್ಲಾ ಎಡರು ತೊಡರುಗಳನ್ನು ದಾಟಿ ತನ್ನದೇ ವಿಶೇಷ ಮಾದರಿಗಳ ಮೂಲಕ ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಲು ಅವಿರತ ಶ್ರಮ ವಹಿಸುತ್ತಿದೆ.

 

ಅವಕಾಶ ವಂಚಿತ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆಹಾರ ನೀಡಿ, ಉದ್ಯೋಗದ ಮಾರ್ಗವನ್ನು ಕಲ್ಪಿಸಿಕೊಡುವ ಮೂಲಕ ಅವರು ಬಡತನವನ್ನು ಮೆಟ್ಟಿ ನ್ಲ್ಲಿಲುವಂತೆ ಮಾಡುವ ಉದಾತ್ತ ಗುರಿಯನ್ನು ಜೆನಿ ತಮ್ಮ ಸಂಸ್ಥೆಯ ಮೂಲಕ ಕಾಣುತ್ತಿದ್ದಾರೆ.ಇದೀಗ ಹತ್ತು ವರ್ಷಗಳ ಅವಧಿಯಲ್ಲಿ ಸುಮಾರು 400 ಗಣಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಿಕೊಡುವ ಮೂಲಕ ಅದು ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ.

ದೇಶ ವಿದೇಶಗಳ ದಾನಿಗಳ ಉದಾರ ಮನಸ್ಸಿನಿಂದಲೇ ನಡೆಯುತ್ತಿರುವ `ಬ್ಯಾನ್‌ಯನ್ ಶಾಲೆ~ಯಲ್ಲಿ ಹಲವು ವಿದೇಶೀಯರೂ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ.

 

`ಈ ಮಕ್ಕಳನ್ನು ಕ್ಲ್ಲಲುಗಣಿಗಳಲ್ಲಿನ ಅವರ ಗುಡಿಸಲುಗಳಿಂದ ಶಾಲೆಗೆ ಕರೆತರುವುದೇ ಸಾಹಸದ ಕೆಲಸ. ದುಸ್ತರವಾದ ಮಾರ್ಗದ ಮಧ್ಯೆ ಈ ಮಕ್ಕಳನ್ನು ಕರೆದುಕೊಂಡು ಬರಲು ಯಾವ ವಾಹನ ಮಾಲೀಕರೂ ಮುಂದಾಗುತ್ತಿಲ್ಲ.

 

ಈಗ ಒಬ್ಬರು ಈ ಕೆಲಸವನ್ನು ಹೊತ್ತುಕೊಂಡಿದ್ದರೂ ಈ ದಿಸೆಯಲ್ಲಿ ಸಂಸ್ಥೆಗೆ ನೆರವು ನೀಡಲು ಇನ್ನೂ ಉದಾರಿಗಳು ಬೇಕು~ ಎನ್ನುತ್ತಾರೆ ಜೆನಿ ವರ್ಮಾ. ಇನ್ನಷ್ಟು ಸೇವಾಕಾಂಕ್ಷಿಗಳ ನೆರವನ್ನೂ `ಬ್ಯಾನ್‌ಯನ್~ ನಿರೀಕ್ಷಿಸುತ್ತಿದೆ.ಮುಂದಿನ ವರ್ಷಗಳಲ್ಲಿ ಶಾಲೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಜೆನಿ ಅವರದ್ದು. `ಕೆಲವು ವರ್ಷಗಳ ಬಳಿಕ ಈ ಮಕ್ಕಳಿಗೇ ಇದನ್ನು ವಹಿಸಿಕೊಡುತ್ತೇನೆ. ಅವರೇ ಇದನ್ನು ಮುನ್ನಡೆಸಿಕೊಂಡು ಹೋಗಲಿ~ ಎಂಬ ಆಶಯವನ್ನೂ ಅವರು ಮುಂದಿಟ್ಟರು.

 `ಬ್ಯಾನ್‌ಯನ್~ ಎಂಬ ಈ ಆಲದ ಮರದಡಿ ಭಾಷೆ, ಧರ್ಮದ ಚೌಕಟ್ಟು ಮೀರಿ ಮಕ್ಕಳು ಬೆರೆತಿದ್ದಾರೆ.ಕಲ್ಲುಗಣಿಯ ಕತ್ತಲ ಕೂಪದಿಂದ ಹೊರಬಂದ ಅವರ ಕಣ್ಣುಗಳಲ್ಲಿ ಭರವಸೆಯ ಹೊಸ ಆಶಾಕಿರಣ. ತಮ್ಮಂದಿಗೆ ಇತರರನ್ನೂ ಈ ಆಲದ ನೆರಳಿನಡಿ ಕರೆತರುವ ಉಮೇದು ಅವರದ್ದು. ಕಲ್ಲುಗಳ ನಡುವೆ ಹೂವು ಅರಳಿಸುವ ಕೆಲಸ ಹೀಗೆ ತಣ್ಣಗೆ ನಡೆಯುತ್ತಿದೆ.ವಿಳಾಸ: ಬ್ಯಾನ್‌ಯನ್ ಸಮುದಾಯ ಶಾಲೆ, 51, 8ನೇ ಮೇನ್, ಹೊರಮಾವು ಮುಖ್ಯರಸ್ತೆ, ಕಲ್ಯಾಣನಗರ ಅಂಚೆ, ಬೆಂಗಳೂರು- 560043.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry