ಶನಿವಾರ, ಜುಲೈ 31, 2021
28 °C

ಕಳಂಕಿತ ಐಎಎಸ್ ದಂಪತಿ ಆಸ್ತಿ ತಾತ್ಕಾಲಿಕ ಸ್ವಾಧೀನಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್ (ಪಿಟಿಐ): ಅಕ್ರಮವಾಗಿ 350 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಗಳಿಸಿರುವ ಆರೋಪದ ಅಡಿಯಲ್ಲಿ ಹುದ್ದೆಯಿಂದ ಅಮಾನತು ಗೊಂಡಿರುವ ಐಎಎಸ್ ದಂಪತಿ ಅರವಿಂದ್ ಮತ್ತು ಟಿನು ಜೋಶಿ ಅವರ ಆಸ್ತಿಯನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.ಅಹಮದಾಬಾದ್‌ನಲ್ಲಿರುವ ಜಾರಿ ನಿರ್ದೇಶನಾಯಲದ ವಲಯ ಕಚೇರಿಯು ಕಳಂಕಿತ ದಂಪತಿಯ ಆಸ್ತಿಯನ್ನು ತಾತ್ಕಾಲಿಕವಾಗಿ ವಶಪಡಿಸಿಕೊಳ್ಳಲು ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಿರ್ದೇಶನಾಲಯವು 1979ರ ತಂಡದ ಐಎಎಸ್ ಅಧಿಕಾರಿಗಳಾಗಿರುವ ಇಬ್ಬರ ವಿರುದ್ಧ ಜನವರಿ ತಿಂಗಳಲ್ಲಿ ಅಕ್ರಮ ಲೇವಾದೇವಿ ನಡೆಸಿರುವ ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.ಫೆಬ್ರುವರಿ ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯು ಭೋಪಾಲ್‌ನಲ್ಲಿರುವ ಅರವಿಂದ್ ಹಾಗೂ ಟಿನು ಅವರಿಗೆ ಸೇರಿದ ಆಸ್ತಿ ಪಾಸ್ತಿಗಳ ಮೇಲೆ ದಾಳಿಸಿ 350 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.