ಕಳಪೆ ಕಾಮಗಾರಿಗೆ ಅವಕಾಶ ಬೇಡ

7

ಕಳಪೆ ಕಾಮಗಾರಿಗೆ ಅವಕಾಶ ಬೇಡ

Published:
Updated:

ಔರಾದ್: ಜನರು ಜಾಗೃತರಾದರೆ ಕಳಪೆ ಕಾಮಗಾರಿ ತಡೆಯಬಹುದಾಗಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.ತಾಲ್ಲೂಕಿನ ಗೌಂಡಗಾಂವ್ ಗ್ರಾಮದ ಕೂಡು ರಸ್ತೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಎರಡು ದಶಕಗಳಿಂದ ಈ ಗ್ರಾಮಸ್ಥರು ಉತ್ತಮ ರಸ್ತೆ ಕಂಡಿಲ್ಲ. ಜನರ ಬೇಡಿಕೆ ಮೇರೆಗೆ 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣದಲ್ಲಿ ಯಾವುದೇ ಲೋಪವಾಗದಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಾಮಗಾರಿಯಲ್ಲಿ ಯಾವುದೇ ರೀತಿಯ ದೋಷ ಇಲ್ಲವೇ ಕಳಪೆ ಕಂಡು ಬಂದಲ್ಲಿ ತಕ್ಷಣ ಅದನ್ನು ತಡೆ ಹಿಡಿದು ಸಂಬಂಧಿತರಿಗೆ ಸೂಚಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.ನಿರಂತರ ಜ್ಯೋತಿ ಯೋಜನೆಯಡಿ ತಾಲ್ಲೂಕಿಗೆ 10 ಕೋಟಿ ರೂ. ಮಂಜೂರಾಗಿದೆ. ವಿದ್ಯುತ್ ಖಾತೆ ಸಚಿವರು ಶೀಘ್ರದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಧುರೀಣರಾದ ರಮೇಶ ಬಿರಾದಾರ, ಶರಣಪ್ಪ ಪಂಚಾಕ್ಷಿರೆ, ಚಂದ್ರಪಾಲ ಪಾಟೀಲ, ಬಂಡೆಪ್ಪ ಕಂಟೆ, ಕಾಶಿನಾಥ ಜಾಧವ್, ವಿನಾಯಕರಾಗ ಜಗದಾಳೆ, ಸಚಿನ ರಾಠೋಡ, ರಮೇಶ ವಾಘಮಾರೆ, ಅಮರ ಯಡವೆ ಮತ್ತಿತರು ಪಾಲ್ಗೊಂಡರು. ಪಡಿತರ ಚೀಟಿ, ವಿಧವಾ ವೇತನ, ನಿವೇಶನ ಮತ್ತಿತರೆ ಬೇಡಿಕೆ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry