ಗುರುವಾರ , ಜೂನ್ 24, 2021
25 °C

ಕಳಪೆ ಗುಣಮಟ್ಟದ ಔಷಧ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಔಷಧ ನಿಯಂತ್ರಣ ಇಲಾಖೆಯು ಇತ್ತೀಚೆಗೆ ನಗರದ ವಿವಿ­ಧೆಡೆ ನಡೆಸಿದ ತಪಾಸಣೆಯಲ್ಲಿ ಕಳಪೆ ಗುಣಮಟ್ಟದ ಔಷಧ­ಗಳು ಪತ್ತೆ­ಯಾಗಿದ್ದು ಸಾರ್ವಜನಿಕರು ಔಷಧ ಖರೀದಿಸು­ವಲ್ಲಿ  ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದೆ.ಬಿ ಆಂಡ್ ಟಿ ಫಾರ್ಮಾಸ್ಯುಟಿಕಲ್ಸ್ ತಯಾರಿಸಿರುವ ಇಎಫ್‌ಎಲ್‌046 ಬ್ಯಾಚ್‌ ಸಂಖ್ಯೆಯ ಎನ್‌ಫ್ಲೋಸಿನ್ ಸಿರಪ್ ಮತ್ತು  ಲೈಫ್ ವಿಜನ್ ಹೆಲ್ತ್‌ಕೇರ್‌ನ ಎಲ್‌ವಿಸಿ686 ಬ್ಯಾಚ್ ಸಂಖ್ಯೆಯ ರಾಬಿನೆಮ್‌ಡಿಎಸ್‌ಆರ್ ಕ್ಯಾಪ್ಸೂಲ್‌ಗಳನ್ನು ಕಳಪೆ ಗುಣಮಟ್ಟದ ಔಷಧಗಳೆಂದು ಗುರುತಿಸಲಾಗಿದೆ.ಮಿನೋಫಾರ್ಮಾ ಲ್ಯಾಬೋರೇಟ­ರಿಸ್ ತಯಾರಿಕೆಯ ಎಡಿಡಿ13002 ಬ್ಯಾಚ್ ಸಂಖ್ಯೆಯ ಫ್ಲೇವರ್ಡ್‌ ಡಿಸ್ಪರ್ಸಿಬಲ್ ಅಮಾಕ್ಸಿಲಿನ್ ಟ್ರೈಹೈಡ್ರೇಡ್ ಐ.ಪಿ.250 ಎಂ.ಜಿ ಮಾತ್ರೆಗಳು,  ಈಫಿಲ್ ಫಾರ್ಮ ತಯಾರಿಸಿರುವ ಎಂಪಿಜಿ13013 ಬ್ಯಾಚ್ ಸಂಖ್ಯೆಯ  ಪವರ್‌ಜಿನ್ ಮಾತ್ರೆಗಳು, ಮೆಡೋಫಾರ್ಮ ತಯಾರಿಕೆಯ 3078 ಬ್ಯಾಚ್ ಸಂಖ್ಯೆಯ ಮೆಡೊಮಾಲ್ 650 ಪ್ಯಾರಾಸಿತಮಲ್ ಐ.ಪಿ ಮಾತ್ರೆಗಳು ಕಳಪೆ ಗುಣಮಟ್ಟದ್ದವೆಂದು ಗುರುತಿಸಲಾಗಿದೆ. 

ಮೇಲಿನ ಔಷಧಗಳನ್ನು ಖರೀದಿಸಬಾರದೆಂದು ಇಲಾಖೆಯು ಗ್ರಾಹಕರಲ್ಲಿ ಮನವಿ ಮಾಡಿದೆ.ವ್ಯಾಪಾರಿಗೆ ದಂಡ

ರಸೀದಿ ಮತ್ತು ದಾಖಲೆಗಳು ಇಲ್ಲದೆ ಔಷಧಗಳನ್ನು ಮಾರಾಟ ಮಾಡಿದ ನಗರದ ಔಷಧ ವ್ಯಾಪಾರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ದಂಡ ವಿಧಿಸಿದೆ. ನಗರದ ಚಾಮುಂಡಿನಗರದ ಚಾಮುಂಡಿ ಮೆಡಿಕಲ್ಸ್‌ನ ಪಾಲುದಾರರಾದ ದಿನೇಶ್‌ ಕುಮಾರ್ ಶರ್ಮಾ ಎಂಬು ವವರಿಗೆ ನ್ಯಾಯಾಲಯವು ಒಂದು ದಿನದ ಸಾದಾ ಶಿಕ್ಷೆ ಮತ್ತು ₨ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.