ಕಳಪೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ!

7

ಕಳಪೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ!

Published:
Updated:
ಕಳಪೆ ಗುತ್ತಿಗೆದಾರರು ಕಪ್ಪು ಪಟ್ಟಿಗೆ!

ವಿರಾಜಪೇಟೆ: ಕಾಮಗ್ಛಾರಿ ಗುತ್ತಿಗೆ ಪಡೆದು, ಕಳಪೆ ಕಾಮಗಾರಿ ನಿರ್ವಹಿಸಿ ರುವ ಹಾಗೂ ಕಾಮಗಾರಿಯನ್ನು ಅಪೂರ್ಣಗೊಳಿಸಿರುವ ಗುತ್ತಿಗೆದಾರ ರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಅಂತಹವರಿಗೆ ಯಾವುದೇ ಕಾಮಗಾರಿ ಯನ್ನು ನೀಡದಂತೆ ಕ್ರಮ ವಹಿಸಬೇಕು ಎಂದು ಪ.ಪಂ. ಅಧ್ಯಕ್ಷ ವಿ.ಕೆ.ಸತೀಶ್‌ಕುಮಾರ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.ಪಟ್ಟಣದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಿರುವ ಕುರಿತು ಸದಸ್ಯರಾದ ಬಿ.ಪಿ.ಸೋಮಣ್ಣ, ಇ.ಸಿ.ಜೀವನ್ ಹಾಗೂ ಹಿರಿಯ ಸದಸ್ಯ ಎಂ.ಕೆ. ಪೂವಯ್ಯ ಸಭೆಯಲ್ಲಿ ಆರೋಪಿಸಿದರು. ವಿರಾಜಪೇಟೆ ಬದ್ರಿಯಾ ಹೊಟೇಲ್ ಜಂಕ್ಷನ್‌ನಿಂದ ಮಸೀದಿವರೆಗಿನ ಕಾಂಕ್ರೀಟ್ ರಸ್ತೆ ಕಳಪೆಯಿಂದ ಕೂಡಿದೆ. ಮೈಸೂರಿನ ಗುತ್ತಿಗೆದಾರರು ರಸ್ತೆ ನಿರ್ಮಾಣದ ಬಿಲ್ ಪಡೆದು ನಾಪತ್ತೆ ಆಗಿದ್ದಾರೆ. ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಪಂಚಾಯಿತಿಯ ಸದಸ್ಯರಾಗಲಿ, ಅಧಿಕಾರಿಗಳನ್ನು ಭೇಟಿ ಮಾಡುವ ಸೌಜನ್ಯ ತೋರಿಸಿಲ್ಲ. ಆದ್ದರಿಂದ ಈ ಗುತ್ತಿಗೆದಾರರಿಗೆ ಪಂಚಾಯಿತಿ ವತಿಯಿಂದ ನೋಟೀಸ್ ಜಾರಿ ಮಾಡಬೇಕು ಎಂದು ಸಭೆ ತೀರ್ಮಾನಿಸಿತು.ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬಿಲ್ ಪಾವತಿ ಮಾಡುತ್ತಿರು ವುದಕ್ಕೆ ಕೆಲವು ಸದಸ್ಯರು ವಿರೋಧಿಸಿ ದರು. ರಸ್ತೆ, ಚರಂಡಿ ಹಾಗೂ ದಾರಿ ದೀಪಗಳ ದುರಸ್ತಿ, ಪಟ್ಟಣದಲ್ಲಿ ನಲ್ಲಿ ನೀರು ಪೂರೈಕೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ, ತೆರಿಗೆ ವಸೂಲಾತಿಗೆ ಕಠಿಣ ಕ್ರಮ ಜರುಗಿಸಲು ನಿರ್ಣಯವನ್ನು ಅಂಗೀಕರಿಸಿತು. ಪಟ್ಟಣ ಪಂಚಾಯಿ ತಿಯ 16 ವಿಭಾಗಗಳಲ್ಲಿ 100 ಮಂದಿ ಬಡ ವಿದ್ಯಾರ್ಥಿಗಳಿಗೆ ತಲಾ ಎರಡು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡುವುದು, ಜನಪರ ಕಾಮಗಾರಿಗಳಿಗೆ ಒತ್ತು ನೀಡಲು ಸಮಿತಿ ತೀರ್ಮಾನಿಸಿತು.ಮಾಜಿ ಉಪಾಧ್ಯಕ್ಷ ಎಸ್.ಎಚ್. ಮೈನುದ್ದೀನ್ ಮಾತನಾಡಿ, ಎಲ್ಲ ವಿಭಾಗಳಲ್ಲಿ ಕಡು ಬಡವರ ಅರ್ಹ ವಿದ್ಯಾರ್ಥಿ ಫಲಾನುಭವಿಗಳನ್ನು ಗುರು ತಿಸಿ ವಿದ್ಯಾರ್ಥಿ ವೇತನ ವಿತರಿಸುವಂತೆ ಆಗ್ರಹಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಕೌಸರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಕಟ್ಟಿಪೂಣಚ್ಚ, ಮುಖ್ಯಾಧಿಕಾರಿ ರಮೇಶ್, ಎಂಜಿನಿಯರ್ ಎಂ.ಸಿ. ಪುಟ್ಟುಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry