ಮಂಗಳವಾರ, ಜೂನ್ 15, 2021
27 °C

ಕಳಪೆ ಬೀಜದಿಂದ ಕಲ್ಲಂಗಡಿ ಬೆಳೆ ಹಾನಿ: ರೈತರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಚಿಕ್ಕಮೊರಬ ಗ್ರಾಮದ ಭೀಮನಗೌಡ ರುದ್ರಗೌಡ ಪಾಟೀಲ ಎಂಬವರ ಏಳು ಎಕರೆ ಕಲ್ಲಂಗಡಿ ಬೆಳೆ ಕಾಯಿ ಕಟ್ಟುವ ಹಂತ ದಲ್ಲಿಯೇ ಒಣಗಲಾರಂಭಿಸಿದ್ದು, ಲಕ್ಷಾಂ ತರ ಹಣ ಖರ್ಚು ಮಾಡಿದ್ದ ರೈತರು ಸಂಕಷ್ಟ ಎದುರಿಸುತ್ತಿ ್ದದಾರೆ.ಕಳಪೆ ಬೀಜವೇ ಕಲ್ಲಂಗಡಿ ಬೆಳೆ ಒಣಗಲು ಕಾರಣವಾಗಿದೆ ಎಂಬುದು ರೈತರ ಆರೋಪವಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಲಾಗಿದೆ. ಪರಿಶೀಲನೆ ನಡೆಸಿ ಹಾನಿಗೊಳಗಾದ ರೈತನಿಗೆ ನ್ಯಾಯ ದೊರಕಿಸಿ ಕೊಡುವಂತೆ ಕೋರಲಾಗಿದೆ.`ರಟ್ಟೀಹಳ್ಳಿ ಗ್ರಾಮದ ಖಾಸಗಿ ಬೀಜ ಮಾರಾಟಗಾರರ ಬಳಿ ನಾಮಧಾರಿ ಕಂಪನಿಯ ಕಲ್ಲಂಗಡಿ ಬೀಜಗಳನ್ನು ತಂದು ಬಿತ್ತನೆ ಮಾಡಲಾಗಿತ್ತು. ಕೆಲವು ದಿನ ಸಮೃದ್ಧವಾಗಿ ಬೆಳೆ ಬೆಳೆಯಿತು. ಕಾಯಿ ಕಟ್ಟುವ ಹಂತದಲ್ಲಿ ಸಮರ್ಪಕ ವಾಗಿ ಕಾಯಿ ಕಟ್ಟದೇ ಅಲ್ಲೊಂದು ಇಲ್ಲೊಂದು ಕಾಯಿ ಕಾಣಿಸಿಕೊಂಡು ಈಗ ಸಂಪೂರ್ಣ ಬಳ್ಳಿಯೇ ಒಣಗ ಲಾರಂಭಿಸಿದೆ. ಇಲ್ಲಿಯವರೆಗೆ ಯಾವುದೇ ಫಲವನ್ನು ಪಡೆದಿಲ್ಲ, ಕಂಪನಿಯವರು ಹೇಳಿದಂತೆ ಕೀಟನಾಶಕ ಸಿಂಪರಣೆ ಮಾಡಿ ದರೂ ಉಪಯೋಗವಾಗಿಲ್ಲ. ಕಳಪೆ ಬೀಜವೇ ಇದಕ್ಕೆ ಕಾರಣ~ ಎಂದು ರೈತ ಭೀಮನಗೌಡ ಪಾಟೀಲ ದೂರಿದ್ದಾರೆ.`ಸಾಲ ಮಾಡಿ ಲಕ್ಷಾಂತರ ರೂಪಾಯಿ ಭೂಮಿಗೆ ಹಾಕಿರುವ ರೈತನಿಗೆ ಸುಮಾರು ರೂ 5ಲಕ್ಷ ಹಾನಿಯಾಗಿದೆ. ಇದರಿಂದ ರೈತ ಚಿಂತೆಗೆ ಒಳಗಾಗಿದ್ದು, ಬೀಜ ಕಂಪನಿಯವರು ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತ ಸಂಘದ ವತಿಯಿಂದ ರಾಣೇಬೆನ್ನೂರಿನಲ್ಲಿರುವ ಬೀಜ ಕಂಪನಿಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗುತ್ತೇವೆ~ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ವಿ. ಕೆಂಚಳ್ಳೇರ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.