ಕಳಪೆ ಸೇವೆಗೆ ರೂ.5 ಕೋಟಿ ದಂಡ

7

ಕಳಪೆ ಸೇವೆಗೆ ರೂ.5 ಕೋಟಿ ದಂಡ

Published:
Updated:

ನವದೆಹಲಿ (ಪಿಟಿಐ): ಅನಪೇಕ್ಷಿತ ವಾಣಿಜ್ಯ ಕರೆ (ಟೆಲಿ ಮಾರುಕಟ್ಟೆ ಕರೆ) ಮತ್ತು ಕಳಪೆ ಸೇವೆಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ದೂರವಾಣಿ ಸೇವಾ ಸಂಸ್ಥೆಗಳಿಗೆ 2013ರಲ್ಲಿ ಒಟ್ಟು ರೂ.5 ಕೋಟಿ ದಂಡ ವಿಧಿಸಿದೆ.ಟೆಲಿ ಮಾರುಕಟ್ಟೆ ಕರೆಗಳಿಗಾಗಿ ಬಳಕೆಯಾದ 9 ಲಕ್ಷ ಮೊಬೈಲ್‌ ದೂರ­ವಾಣಿ ಸಂಖ್ಯೆಗಳನ್ನು ‘ಟ್ರಾಯ್‌’ ರದ್ದುಪಡಿ­ಸಿದ್ದು, ಸೇವೆ ಸ್ಥಗಿತ­ಗೊಳಿಸಿದೆ. ನೋಂದಾ­ಯಿ­ಸಿಕೊಳ್ಳದೆ ವಾಣಿಜ್ಯ ಕರೆ ಮಾಡಿದ, ಮತ್ತು ‘ಎಸ್‌ಎಂಎಸ್‌’ ಕಳುಹಿಸಿದ 1.74 ಲಕ್ಷ  ಸಂಖ್ಯೆಗಳನ್ನು ‘ಕಪ್ಪು ಪಟ್ಟಿಗೆ’ ಸೇರಿಸಿದೆ.  ಒಟ್ಟು 170 ದೂರವಾಣಿ ವೃತ್ತಗಳಲ್ಲಿ ಸೇವಾ ಗುಣಮಟ್ಟ ಕಾಯ್ದುಕೊಳ್ಳದ ವಿವಿಧ ಕಂಪೆನಿಗಳಿಗೆ  ರೂ.2.8 ಕೋಟಿ  ದಂಡ ವಿಧಿಸಲಾಗಿದೆ ಎಂದು ‘ಟ್ರಾಯ್‌’ ಪ್ರಕಟಣೆ ತಿಳಿಸಿದೆ.

ಅನಪೇಕ್ಷಿತ ಕರೆಗಳಿಗೆ ನಿಷೇಧ ಹೇರಿದ ನಂತರ ವಾಣಿಜ್ಯ ಕರೆಗಳ ಸಂಖ್ಯೆ ತಿಂಗಳಿಗೆ 50 ಸಾವಿರದಿಂದ 11 ಸಾವಿರಕ್ಕೆ ತಗ್ಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry