ಭಾನುವಾರ, ಜನವರಿ 19, 2020
23 °C

ಕಳಪೆ ಹತ್ತಿ ಬೀಜ: ಪರಿಹಾರ ಹೇಗೆ?

ಉಗ್ರನರಸಿಂಹೇಗೌಡ,ಮೈಸೂರು Updated:

ಅಕ್ಷರ ಗಾತ್ರ : | |

ರೈತರಿಗೆ ಕಳಪೆ ಬಿ.ಟಿ. ಹತ್ತಿ ಬೀಜದಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿರುವುದು ಸಂತೋಷದ ಸಂಗತಿ. ಆದರೆ ಈ ನಷ್ಟಪರಿಹಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿವೆ.ಕಳಪೆ ಹತ್ತಿ ಬೀಜ ಪೂರೈಸಿರುವುದು ಖಾಸಗಿ ಕಂಪೆನಿ, ಪರಿಹಾರ ಕೊಡಲು ನಿರ್ಧರಿಸಿರುವುದು ಸರ್ಕಾರ. ಹೀಗೆ ಸರ್ಕಾರ ಖಾಸಗಿ ಬೀಜ ಕಂಪೆನಿಯ ಪರವಾಗಿ ಎಷ್ಟು ಬಾರಿ ಪರಿಹಾರ ಕೊಡಲು ಸಾಧ್ಯ ಅಥವಾ ಬೀಜ ಕಂಪೆನಿ ಏನಾದರೂ ಸರ್ಕಾರದ ಬಳಿ ನಷ್ಟ ಪರಿಹಾರಕ್ಕೆಂದು ಒಂದು ಮೊತ್ತವನ್ನು ಠೇವಣಿಯಾಗಿ ಇಟ್ಟಿದೆಯೇ? ಕಳಪೆ ಬೀಜ ಪೂರೈಕೆಗಾಗಿ ಕಂಪೆನಿಯನ್ನು ಹೊಣೆಗಾರರನ್ನಾಗಿ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲವೆ?ಸರ್ಕಾರವೇ ಉತ್ತಮ ಗುಣಮಟ್ಟದ, ಬಿ.ಟಿ. ಅಲ್ಲದ ಬೀಜ ಪೂರೈಸಲು ಸಾಧ್ಯವಿಲ್ಲವೆ?

ಸರ್ಕಾರದ ಅಂಗಸಂಸ್ಥೆಯಾದ ರಾಜ್ಯ ಬೀಜ ನಿಗಮ ನಿಷ್ಕ್ರಿಯ ವಾಗಿದೆಯೇ? ಈ ನಿಟ್ಟಿನಲ್ಲಿ

ಸರ್ಕಾರದ ಯೋಚನೆ, ಯೋಜನೆಗಳು ಏನಾದರೂ ಇವೆಯೇ?ಈಗ ಕಳಪೆ ಬಿ.ಟಿ. ಹತ್ತಿ ಬೀಜ ಪೂರೈಸಿರುವ ಖಾಸಗಿ ಕಂಪೆನಿ ಮತ್ತು ಸರ್ಕಾರದ ನಡುವೆ ಏನಾದರೂ ಒಡಂಬಡಿಕೆ ಆಗಿದೆಯೇ?‘ನಷ್ಟ ಪರಿಹಾರ ಅಂದಾಜಿಸಲು ನಾಲ್ಕು ಜನ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ

ಸಮಿತಿಗೆ ಸೂಚಿಸಲಾಗಿದೆ’ ಎಂದು ಸರ್ಕಾರ ತಿಳಿಸಿತ್ತು. ಆ ಸಮಿತಿಯ ವರದಿಯಾಗಲಿ, ತಜ್ಞರ ಹೆಸರುಗಳಾಗಲಿ, ಪರಿಹಾರದ ಮೊತ್ತಗಳ ಪ್ರಸ್ತಾಪ ವಾಗಲಿ ಎಲ್ಲೂ ಬಹಿರಂಗವಾಗಿಲ್ಲ. ಏಕೆ?

ಪ್ರತಿಕ್ರಿಯಿಸಿ (+)