ಭಾನುವಾರ, ಜೂನ್ 7, 2020
24 °C

ಕಳಸಕೊಪ್ಪ ಕೆರೆಗೆ ಶೀಘ್ರ ನೀರು: ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸಕೊಪ್ಪ ಕೆರೆಗೆ ಶೀಘ್ರ ನೀರು: ನಿರಾಣಿ

ಕೆರೂರ: ಹತ್ತಾರು ಹಳ್ಳಿಗಳ ಕುಡಿ ಯುವ ನೀರಿನ ಅಂತರ್ಜಲಕ್ಕೆ ಮೂಲ ಸೆಲೆಯಾಗಿ, ನೂರಾರು ಎಕರೆ ಬೆಳೆಗಳಿಗೆ ನೀರೊದಗಿಸುವ ನೀರಬೂದಿಹಾಳ ಗ್ರಾಮದ ಬಳಿಯ ಕಳಸಕೊಪ್ಪದ ಬೃಹತ್ ಕೆರೆಗೆ ಶೀಘ್ರ  ಘಟಪ್ರಭಾ ಜಲಾಶಯದಿಂದ ನೀರು ಹರಿಸಲು  ಪ್ರಯತ್ನ ನಡೆದಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.ಅವರು ಕಳೆದ ರಾತ್ರಿ ನೀರಬೂದಿಹಾಳದ ದಿ.ಆರ್ ಟಿ ದೇಸಾಯಿ ಕಾಲೇಜು ಆವರಣದಲ್ಲಿ ಸುಮಾರು 60 ಲಕ್ಷ ರೂಪಾಯಿ ವೆಚ್ಚ ದಲ್ಲಿ ನಿರ್ಮಿಸಲಾಗುವ ಕಸ್ತೂರಿಬಾ ಬಾಲಿಕಾ ವಸತಿ ನಿಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತ ನಾಡಿದರು.ಕಾಲುವೆ ನಿರ್ಮಾಣವಾಗಿ ಕೆಲವು ವರ್ಷಗಳಾದರೂ ಅದರಲ್ಲಿ ಸಮರ್ಪ ಕವಾಗಿ ನೀರು ಹರಿದಿಲ್ಲ. ಇದನ್ನೇ ನೆಚ್ಚಿ ರುವ ಸಾವಿರಾರು ರೈತರು, ಮಳೆಯಿಲ್ಲದೇ ಚಾತಕ ಪಕ್ಷಿಯಂತೆ ಕಾಲುವೆಗೆ ನೀರು ಬರುವುದನ್ನು ಕಾಯುತ್ತಿದ್ದಾರೆ. ಕೆರೆಗಾದರೂ ನೀರು ಹರಿದರೆ ಅಂತರ್ಜಲದ ಮೂಲಕ ಸಂಕಷ್ಟದ ಸ್ಥಿತಿಯಿಂದ ಪಾರಾಗ ಬಹುದೆಂಬ ನಿರೀಕ್ಷೆಯಿಂದ ಕೃಷಿಕರು ರಾಜಕೀಯ ನಾಯಕರ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ ಎಂದರು. ಪ್ರಸಕ್ತ ಹಿಂಗಾರು ಮಳೆ ವೈಫಲ್ಯ ದಿಂದ ರಾಜ್ಯದ ಸುಮಾರು 16 ಜಿಲ್ಲೆಗಳ 70 ಕ್ಕೂ ಹೆಚ್ಚು ತಾಲ್ಲೂಕುಗ ಳಲ್ಲಿ ಮಳೆಯಾಗಿಲ್ಲ. ಈ ಪರಿಣಾಮವಾಗಿ ಹಿಡಕಲ್ ಜಲಾಶಯದಲ್ಲಿ ಸಾಕಷ್ಟು ನೀರಿಲ್ಲದೇ ಕಾಲುವೆಗಳಿಗೆ ನೀರು ಹರಿಸಲು ಕೊರತೆ ಉಂಟಾಗಿದೆ ಎಂದು ನಿರಾಣಿ ಹೇಳಿದರು.ಇದಲ್ಲದೇ ಬೆಳಗಾಂವಿ ಹಲವು ಭಾಗದಲ್ಲಿ ಬಲದಂಡೆ ಕಾಲುವೆಗೆ ನೀರು ಹರಿಸಲು ಬಿಡದೇ ಪ್ರಬಲ ಅಡೆ ತಡೆ ಒಡ್ಡುತ್ತಿದ್ದು ಜಿಲ್ಲೆಯ ರೈತರ ಸಮಸ್ಯೆ ತೀವ್ರತೆಗೆ ಕಾರಣವಾಗಿದೆ. ಈ ಸಂಬಂಧ ಸಚಿವ ಬಾಲಚಂದ್ರ ಜಾರಕಿಹೋಳಿ, ಇತರರೊಂದಿಗೆ ಚರ್ಚಿಸಲಾಗಿದ್ದು ಜಿಲ್ಲೆಯ ರೈತರ ಸಮಸ್ಯೆ ಮನವರಿಕೆ ಮಾಡಲಾಗಿದ್ದು, ಇಷ್ಟರಲ್ಲಿಯೇ ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಡಿಸುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.