ಸೋಮವಾರ, ಮೇ 10, 2021
26 °C

ಕಳಸ: ವಿಶಿಷ್ಟ ವೃತ್ತಿ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ವೃತ್ತಿ ತರಬೇತಿ ಶಿಬಿರಗಳೆಂದರೆ ನೀರಸವಾದ ಭಾಷಣ, ಸಿದ್ಧ ಮಾದರಿಯ ತರಬೇತಿ ಎಂದು ವಿದ್ಯಾ ರ್ಥಿಗಳು ಮೂಗುಮುರಿ ಯುತ್ತಾರೆ. ಆದರೆ ಇಲ್ಲಿನ ರೋಟರಿ ಬಾಲಭವನದಲ್ಲಿ ಗುರುವಾರ ಅತ್ಯಂತ ವಿಶಿಷ್ಟ ಸ್ವರೂಪದ ವೃತ್ತಿ ತರಬೇತಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಕಳದ ರಾಜೇಂದ್ರ ಭಟ್ ವಿನೂತನ ಶೈಲಿಯಲ್ಲಿ ದಿನವಿಡೀ ತರಬೇತಿ ನಡೆಸಿದರು. ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ. ಮತ್ತು ಬಿ.ಬಿ.ಎಂ.ನ 70 ವಿದ್ಯಾ ರ್ಥಿಗಳು ಭಾಗವಹಿಸಿದ್ದ ಶಿಬಿರದಲ್ಲಿ ಉಪನ್ಯಾಸಕ್ಕಿಂತ ಸ್ವಅನುಭವದ ಘಟನಾವಳಿಗಳೇ ಪ್ರಮುಖ ಪಾತ್ರ ವಹಿಸಿದವು.ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು 4 ತಂಡಗಳಲ್ಲಿ ವಿಂಗಡಿಸಿದ ಭಟ್, ಅವರೆಲ್ಲರನ್ನೂ ವಿವಿಧ ಆಟಗಳಲ್ಲಿ ತೊಡಗಿಸಿ ಆ ಮೂಲಕ ಭವಿಷ್ಯದ ಜೀವನದಲ್ಲಿ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಅನುಭವ ನೀಡಿದರು. ಪದವಿಯ ನಂತರ ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯದೆ ವಿವಿಧ ಸ್ವಯಂ ಉದ್ಯೋಗ ಕೈಗೊಳ್ಳಬಹುದು ಎಂದೂ  ಉದಾಹರಣೆ ನೀಡಿದರು.

 

ಯಶಸ್ಸಿಗಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸರಳ ತಂತ್ರಗಳ ಬಗ್ಗೆ ಮಾಹಿತಿ ನೀಡಿದ ಭಟ್, ವಿದ್ಯಾರ್ಥಿಗಳು ಅಧ್ಯಯನ ಶೀಲರಾದರೆ ಕೆ.ಎ.ಎಸ್. ಮತ್ತು ಐ.ಎ.ಎಸ್. ನಂತಹ ಪರೀಕ್ಷೆಯಲ್ಲೂ ಯಶಸ್ವಿಯಾಗಬಹುದು ಎಂದರು. ಅತ್ಯುತ್ತಮ ಶಿಬಿರಾರ್ಥಿಗಳಾಗಿ ಆಯ್ಕೆಯಾದ ಸಂಶುದ್ದೀನ್, ಮುರುಳಿ, ಅವಿನಾಶ್ ಮತ್ತು ಪ್ರಮೀಳ ಅವರಿಗೆ ಬಹುಮಾನ ನೀಡಲಾಯಿತು.  ರೋಟರಿ ಅಧ್ಯಕ್ಷ ಪಿ.ಎಸ್.ಅಂಟೋನಿ, ಕಾರ್ಯದರ್ಶಿ ಕಿರಣ್ ಶೆಟ್ಟಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಮಾಲತಿ ಹೆಬ್ಬಾರ್, ಸುಗಮ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಲಕ್ಷ್ಮಣಗೌಡ  ಮತ್ತಿತರರು ಭಾಗವಹಿಸಿದ್ದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.