ಕಳಾಮಂದಿರ್ ಸೀರೆ ಹಬ್ಬ

7

ಕಳಾಮಂದಿರ್ ಸೀರೆ ಹಬ್ಬ

Published:
Updated:

ಕಳಾಮಂದಿರ್ ಹೈದರಾಬಾದ್ ಮೂಲದ ಬೃಹತ್ ವಸ್ತ್ರಭಂಡಾರ ಮತ್ತು ಸೀರೆ ಬ್ರಾಂಡ್. ದಕ್ಷಿಣ ಭಾರತದ ವೈವಿಧ್ಯಮಯ, ಕಲಾತ್ಮಕ ಶೈಲಿಯ ಸೀರೆಗಳಿಗೆ ಹೆಸರುವಾಸಿ. ಅದು ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ವಿನ್ಯಾಸದ ಸೀರೆಗಳ ಸಂಗ್ರಹವನ್ನು ಅನಾವರಣಗೊಳಿಸಿದೆ. ನಾನಾ ಬಣ್ಣ, ಅಪೂರ್ವ ವಿನ್ಯಾಸ, ಉತ್ತಮ ಗುಣಮಟ್ಟ, ಸೀಮಿತ ಆವೃತ್ತಿಯ ಕಲಾತ್ಮಕ ಸೀರೆಗಳು ಇದರ ವಿಶೇಷ.ಸಾಂಪ್ರದಾಯಿಕ ಕಾಂಜೀವರಂ ಸೀರೆ `ಪರಂಪರಾ~, ಸಮೃದ್ಧ ಕಲಾವಂತಿಕೆ, ನೇಕಾರರ ಕುಸುರಿ ಕೆಲಸ ಒಳಗೊಂಡಿರುವ `ಕುಬೇರಾ~ ಸಿಲ್ಕ್, ತೊಟ್ಟಿರುವ ನೀರೆಯ ಅಂದ ಹೆಚ್ಚಿಸುವ, ಅಪ್ಸರೆಯರು ತೊಡುವಂತಹ `ಮಾಂಗಲ್ಯ ಸಿಲ್ಕ್~ ಇಲ್ಲಿದೆ.  ಸಾಂಪ್ರದಾಯಿಕ `ಉಪ್ಪಾಡಾ ಸಿಲ್ಕ್~, ಕಳಾಮಂದಿರದ ಶ್ರೇಷ್ಠ ಉತ್ಪನ್ನಗಳಲ್ಲೊಂದು. ಜಾಮ್‌ದಾನಿ ನೇಯ್ಗೆಯ ಕಲಾತ್ಮಕತೆ, ಅತ್ಯುತ್ತಮ ಗುಣಮಟ್ಟ ಇದರಲ್ಲಿದೆ.`ವಸ್ತ್ರಕಲಾ~ ಸಿಲ್ಕ್ ಸಾಂಪ್ರದಾಯಿಕ ಮತ್ತು ಆಧುನಿಕತೆಯ ಮಿಶ್ರಣದ ಕಾಂಜೀವರಂ. ಮಹಿಳೆಯ ಅಂದ ಹೆಚ್ಚಿಸುತ್ತದೆ. ಕೈ ಕುಸುರಿಯ ಕೆಲಸ ಹೆಚ್ಚು ಇದರಲ್ಲಿದೆ. ಸಾಮುದ್ರಿಕಾ ಸಾರ್ವತ್ರಿಕ ಮೆಚ್ಚುಗೆ ಪಡೆದಿರುವ ಫ್ಯಾನ್ಸಿ ಸೀರೆ. ಇದರಲ್ಲಿ ಆಧುನಿಕ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಪುರುಷರು, ಮಕ್ಕಳ ಉಡುಗೆಗಳೂ ಇಲ್ಲಿವೆ.`ಹಬ್ಬದ ಪ್ರಯುಕ್ತ ನಮ್ಮ ಪ್ರತಿಭಾವಂತ ಕಲಾವಿದರು ಅದ್ಭುತವಾದ ಸೀರೆಗಳನ್ನು ನೇಯ್ದಿದ್ದಾರೆ. ವಿನ್ಯಾಸ, ಬಣ್ಣ, ಗುಣಮಟ್ಟದಲ್ಲಿ ಇವುಗಳು ಹೆಸರುವಾಸಿಯಾಗಿವೆ. ಇದು ಗ್ರಾಹಕರಿಗೆ ಮುದ ನೀಡುವುದರಲ್ಲಿ ಸಂದೇಹವಿಲ್ಲ~ ಎನ್ನುತ್ತಾರೆ ಕಳಾಮಂದಿರಂನ ಕರ್ನಾಟಕ ಮುಖ್ಯಸ್ಥ ಕಲ್ಯಾಣ್ ಅಣ್ಣಂ. ಎಂ. ಜಿ. ರಸ್ತೆ, ಮಾರತಹಳ್ಳಿ, ಮಲ್ಲೆೀಶ್ವರಂ, ಜಯನಗರ ಮತ್ತು ಚಿಕ್ಕಪೇಟೆ ಕಳಾಮಂದಿರ್ ಮಳಿಗೆಗಳಲ್ಲಿ ಈ ಸೀರೆಗಳು ಲಭ್ಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry