ಗುರುವಾರ , ಮೇ 6, 2021
26 °C
ಕೃಷಿ ಯಂತ್ರೋಪಕರಣ ಬಳಕೆ

ಕಳೆಗುಂದುತ್ತಿರುವ ಕಾರಹುಣ್ಣಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ರೈತ ತನ್ನೊಂದಿಗೆ ಮಳೆ, ಬಿಸಿಲು, ಚಳಿ ಲೆಕ್ಕಿಸದೇ ಹಗಲಿರುಳು ಸಾಥ್ ನೀಡುವ ಎತ್ತು ಹಾಗೂ ಬಿತ್ತನೆಗೆ ಬಳಸಲ್ಪಡುವ ದೇಸಿ  ಉಪಕರಣಳನ್ನು ಪೂಜಿಸಿ, ಸಂಭ್ರಮಿಸುವ ಪ್ರಮುಖ ಹಬ್ಬ ಕಾರಣ ಹುಣ್ಣಿಮೆ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರವೇಶದಿಂದಾಗಿ ಕಳೆಗುಂದುತ್ತಿದೆ.ಮುಂಗಾರು ಪ್ರವೇಶದೊಂದಿಗೆ ಜೂನ್ ಮೊದಲ ವಾರದಲ್ಲೇ ಆಚರಿಸಲ್ಪಡುವ ಈ ಹಬ್ಬಕ್ಕಾಗಿ ಎತ್ತುಗಳನ್ನು ಶೃಂಗರಿಸಲು ನಾಲ್ಕುದಿನ ಮುಂಚೆಯೇ ರೈತರು ಬಾಸಿಂಗ, ಮೂಗುದಾರ, ಕೊರಳ ಜತ್ಗಿ, ಕೊರಳಲ್ಲಿನ ಗೆಜ್ಜೆ ಗಂಟೆ, ಚಂಗಿನ್, ಮತಾಟಿ, ಬಣ್ಣದ ಹಗ್ಗ, ವಾರನಿಸ್, ಬಂಡಿಗಳಿಗೆ ಬಳಿಯಲು ಡಾಂಬರ್, ದೃಷ್ಟಿ ಮಣಿ, ಮೊಗಡಾ, ಝೋಲ್, ಕವಡಿ ಮಾಲೆ, ಬಾರಕೋಲ್, ನವಳು, ಮೊದಲಾದ ಸಾಮಗ್ರಿ ಖರೀದಿ ಭರಾಟೆಯಲ್ಲಿ ತೊಡಗುತ್ತಿದ್ದರು.ಒಂದೂವರೆ ದಶಕದ ಹಿಂದೆ ಅತ್ಯಂತ ಸಣ್ಣ ರೈತ ಕೂಡ ಕೇವಲ ರೂ. 100ರಲ್ಲಿ ತನಗೆ ಬೇಕಾದ ರೀತಿ ಅಲಂಕಾರಿಕ ಸಾಮಗ್ರಿ ಖರೀದಿಸಿ ಖುಷಿ ಪಡುತ್ತಿದ್ದ. ಅಷ್ಟೇ ವಸ್ತು ಈಗ ರೂ. 1,500 ಸಾವಿರ ಖರ್ಚು ಮಾಡಿದರೂ ಖರೀದಿಸುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. `ಬಾರಸೇ ಕೊಟ್ಟು 1 ಚೀಲ ಖಾತ್, ತೇರಾಸೇ ಕೊಟ್ಟು ಬೀಜ ಖರ್ದಿ ಮಾಡಿ ಬಿತ್ಬೇಕೇನ್... ಬೆಳಿಬೇಕೇನ್.... ಎಲ್ಲ ಹೈರಾಣ ಅದಾ ದೊರಿ. ಆದರಭೀ ಏನ್ ಮಾಡ್ಬೇಕ್ಹೆಳ್ರಿ ಬಿಡ್ಲಾಕ್‌ಭೀ ಬರಲ್' ಎಂದು ಸಾಮಗ್ರಿ ಖರೀದಿಗಾಗಿ ಚಿಂತಕೋಟಿ ಅಂಗಡಿಗೆ ಬಂದ ಓತಗಿ ಗ್ರಾಮದ ರೈತ ವೀರಣ್ಣ ರಂಜೇರಿ, ಸಿಂಧನಕೇರಿಯ ಚಂದ್ರಪ್ಪ ರಮೇಶ ವಿಠಾಲೆ  `ಪ್ರಜಾವಾಣಿ' ಎದುರಿಗೆ ಅಸಹಾಯಕತೆ ತೋಡಿಕೊಂಡರು.ವ್ಯಾಪಾರ ಕುದುರಿದೆ:

ಕಳೆದ ಒಂದು ದಶಕ ಹಿಂದೆ ಭಾರೀ ವ್ಯಾಪಾರ ಮಾಡಿದ್ದೆವು. ಗ್ರಾಹಕರಿಗೆ ವೈವಿಧ್ಯಮಯ ಸಾಮಗ್ರಿ ತೋರಿಸುವುದಕ್ಕೆ ಪುರುಸೊತ್ತು ಇರುತ್ತಿರಲಿಲ್ಲ. ಹಬ್ಬದ ಸಂಬಂಧ ತಾತ್ಕಾಲಿಕವಾಗಿ ಕೆಲವು ನೌಕರರನ್ನು ಇಟ್ಟುಕೊಳ್ಳುತ್ತಿದ್ದೇವು.ಈಗ ನಿರೀಕ್ಷೆಯಂತೆ ಗ್ರಾಹಕರು ಬಾರದ ಕಾರಣ ಅವರೊಂದಿಗೆ ಅತ್ಯಂತ ನಯವಾಗಿ ಮಾತನಾಡಿ, ಗಿರಾಕಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ದಶಕದ ಹಿಂದಿನ ಕಾರಹುಣ್ಣಿಮೆಗೆ ಇಂದಿನ ಕಾರಹುಣ್ಣಿಮೆ ಆಚರಣೆ ಹೋಲಿಸಿದಲ್ಲಿ ವ್ಯಾಪಾರ ಶೇ. 50ರಷ್ಟು ಕುಸಿದಿದೆ ಎನ್ನುತ್ತಾರೆ ನಗರದಲ್ಲಿ ಹಲವು ದಶಕಗಳಿಂದ ಕಾರಹುಣ್ಣಿಮೆ ಸಾಮಗ್ರಿ ಮಾರಾಟ ಮಾಡುವ ವ್ಯಾಪಾರಿ ನಾಗೇಶ ಚಂದ್ರಕಾಂತ ಚಿಂತಕೋಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.