ಕಳ್ಳಬಟ್ಟಿಗೆ 18 ಬಲಿ

7

ಕಳ್ಳಬಟ್ಟಿಗೆ 18 ಬಲಿ

Published:
Updated:

ಪಟ್ನಾ (ಐಎಎನ್‌ಎಸ್): ಕಳೆದ 24 ಗಂಟೆಗಳಲ್ಲಿ ಬಿಹಾರದಲ್ಲಿ ಕಳ್ಳಬಟ್ಟಿ ಕುಡಿದು ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿದೆ. ಶನಿವಾರ ಬೆಳಿಗ್ಗೆಯೇ 11 ಜನರು ಮೃತಪಟ್ಟಿದ್ದಾರೆ. ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ ಒಂಬತ್ತು ಮತ್ತು ಇಬ್ಬರು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಭೋಜ್‌ಪುರ ಜಿಲ್ಲೆಯ ಅನಿತಾ ಗ್ರಾಮದಲ್ಲಿ ಕಳ್ಳಭಟ್ಟಿಯ ಮೊದಲ ಪ್ರಕರಣ ಸಂಭವಿಸಿದೆ. ಘಟನೆ ಸಂಬಂಧ 16 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ವರದಿ ನೀಡಲು ಆರು ಜನರ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಪ್ರೀತಂ ಎಸ್. ವರ್ಮ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry