ಕಳ್ಳಬಟ್ಟಿ ದುರಂತ: ತನಿಖೆ ಆರಂಭ

7

ಕಳ್ಳಬಟ್ಟಿ ದುರಂತ: ತನಿಖೆ ಆರಂಭ

Published:
Updated:

ಕಟಕ್ (ಪಿಟಿಐ): ಒಡಿಶಾದ ಕಟಕ್ ಮತ್ತು ಖುರ್ದಾ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕಳ್ಳಬಟ್ಟಿ ದುರಂತ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆರಂಭವಾಗಿದೆ. ಈ ದುರಂತದಿಂದ ಈವರೆಗೆ ಸತ್ತವರ ಸಂಖ್ಯೆ  35ಕ್ಕೆ ಏರಿದೆ.

ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಸ್. ನಾಯ್ಡು ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.

ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೈಲಾಶ್ ಚಂದ್ರ ಭೊಯಿ (40) ಶನಿವಾರ ಮುಂಜಾನೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry