ಕಳ್ಳಬಟ್ಟಿ ದುರಂತ: ನಾಲ್ವರ ಸಾವು

7

ಕಳ್ಳಬಟ್ಟಿ ದುರಂತ: ನಾಲ್ವರ ಸಾವು

Published:
Updated:

ವಿಜಯವಾಡ (ಪಿಟಿಐ): ಇಲ್ಲಿನ ಹಳೆ ಪ್ರದೇಶವೊಂದರಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದ ಕಳ್ಳಬಟ್ಟಿಯನ್ನು ಸೇವಿಸಿ ನಾಲ್ವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.ದುರಂತಕ್ಕೆ ಒಳಗಾದ ವ್ಯಕ್ತಿಗಳು ಶುಕ್ರವಾರ ಬೆಳಿಗ್ಗೆಯೇ ಇಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದ ಕಳ್ಳಬಟ್ಟಿಯನ್ನು ಸೇವಿಸಿದ್ದಾರೆ. ಇದರಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಕೆಲವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದು ಈ ವರ್ಷದ ಎರಡನೇ ಕಳ್ಳಬಟ್ಟಿ ದುರಂತವಾಗಿದ್ದು, ಈ ಮುಂಚೆ ಕೃಷ್ಣ ಜಿಲ್ಲೆಯಲ್ಲಿ ನಡೆದ ಕಳ್ಳಬಟ್ಟಿ ದುರಂತಕ್ಕೆ 17 ಜನರು ಬಲಿಯಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry