ಸೋಮವಾರ, ಜೂನ್ 14, 2021
21 °C

ಕಳ್ಳಬಟ್ಟಿ ನಿರ್ಮೂಲನೆಯಿಂದ ತಾಂಡಾಗಳ ಪ್ರಗತಿ: ಕೌಲಗುಡ್ಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕಳ್ಳಬಟ್ಟಿ ಸೇವನೆ ಯಿಂದ ಆರೋಗ್ಯ ಹದಗೆಡುವುದಲ್ಲದೇ ಕುಟುಂಬ ಮತ್ತು ಸಮಾಜದ ಏಳ್ಗೆ  ಸಾಧ್ಯವಿಲ್ಲ, ತಾಂಡಾಗಳು ಪ್ರಗತಿಯಾಗಬೇಕಾದರೆ ಕಳ್ಳಬಟ್ಟಿ ನಿರ್ಮೂಲನೆಯಿಂದ ಮಾತ್ರ ಸಾಧ್ಯ ಎಂದು ಅಬಕಾರಿ ಉಪ ಆಯುಕ್ತ ಕೌಲಗುಡ್ಡ ಹೇಳಿದರು.ತಾಲ್ಲೂಕಿನ ಸೀತಿಮನಿ ತಾಂಡಾದಲ್ಲಿ ಅಬಕಾರಿ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.ತಾಂಡಾ ನಿವಾಸಿಗಳು ಕಳ್ಳಬಟ್ಟಿ ದಂಧೆಯನ್ನು ತ್ಯಜಿಸಿದರೆ ಸರ್ಕಾರ ದಿಂದ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.ರಾಂಪುರ ಗ್ರಾ.ಪಂ. ಅಧ್ಯಕ್ಷ ಪುಟ್ಟು ಲಂಬಾಣಿ ಮಾತನಾಡಿ, ತಾಂಡಾದಲ್ಲಿನ ಜನರು ಕಡುಬಡವರಾಗಿದ್ದು, ಅವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯಗಳನ್ನು ನೀಡಿದರೆ ಕಳ್ಳಬಟ್ಟಿ ದಂಧೆಯನ್ನು ಬಿಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಪ್ರೊಬೆಷನರಿ ಅಬಕಾರಿ ಉಪ ಅಧೀಕ್ಷಕ ನಾಗೇಶಕುಮಾರ ಮಾತ ನಾಡಿ, ಕಳ್ಳಬಟ್ಟಿ ದಂಧೆ ತ್ಯಜಿಸುವ ವರಿಗೆ  ಸರ್ಕಾರದಿಂದ ಮಂಜೂರಾ ಗುವ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದರು. ಅಬಕಾರಿ ನಿರೀಕ್ಷಕರಾದ ಧಗೆ, ಸಂತೋಷ್, ವಿಶೇಷ  ಅಧಿಕಾರಿ ಮಹಾಂತೇಶ ಲಂಬಾಣಿ, ಗ್ರಾ,ಪಂ,  ಸದಸ್ಯರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.