ಕಳ್ಳಬಟ್ಟಿ ಮಾರಾಟ ನಿಷೇಧಕ್ಕೆ ಗ್ರಾಮಸ್ಥರ ಆಗ್ರಹ

7

ಕಳ್ಳಬಟ್ಟಿ ಮಾರಾಟ ನಿಷೇಧಕ್ಕೆ ಗ್ರಾಮಸ್ಥರ ಆಗ್ರಹ

Published:
Updated:

ಗುತ್ತಲ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಸಮೀಪದ ಬಸಾಪುರ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗ್ರಾಮಸ್ಥರು ಗ್ರಾಮದ ಎಲ್ಲ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಹೇರಳವಾಗಿ ಮದ್ಯ ಮಾರಾಟವಾಗು ತ್ತಿದ್ದು, ಗ್ರಾಮದ ಯುವಕರು ಸೇರಿದಂತೆ ಪ್ರತಿಯೊಬ್ಬರೂ ಮದ್ಯದ ಗೀಳಿಗೆ ಅಂಟಿ ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ಮುಖಂಡ ಹಾಗೂ ತಾ.ಪಂ. ಮಾಜಿ ಸದಸ್ಯ ಬಸವರಾಜ ಕಂಬಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಜೊತೆಗೆ ಕಳ್ಳಬಟ್ಟಿ ಸಹ ಗೂಡ ಗಂಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

 

ಅಕ್ರಮ ಮದ್ಯ ಮಾರಾಟ ಮಾಡುವ ಗೂಡ ಗಂಡಿಗಳು ದಿನ 24 ಗಂಟೆಯೂ ಸಹ ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ ಗ್ರಾಮದಲ್ಲಿ 20 ರಿಂದ 30 ಸಾವಿರ ರೂಪಾಯಿ ಮೌಲ್ಯದ ಮದ್ಯ ಮಾರಾಟ ವಾಗುತ್ತಿದ್ದು, ಕುಡಿತದ ಗೀಳಿಗೆ ಅಂಟಿಕೊಂಡು ಕಳೆದ ವರ್ಷ 22 ಜನ ಸಾವನ್ನಪ್ಪಿದ್ದಾರೆ ಎಂದು ಬಸಣ್ಣ ಕಂಬಳಿ ದೂರಿದ್ದಾರೆ.

 

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿರುವವರ ವಿರುದ್ದ ಗ್ರಾಮಸ್ಥರೆ ಕ್ರಮಕ್ಕೆ ಮುಂದಾಗಿದ್ದು, ಕಳ್ಳಬಟ್ಟಿ ಮಾರಾಟ ಮಾಡಿದವರಿಗೆ 10 ಸಾವಿರ ರೂಪಾಯಿ, ಮದ್ಯ ಮಾರಾಟ ಮಾರಾಟ ಮಾಡುವವರಿಗೆ 5 ಸಾವಿರ ದಂಡ ವಿಧಿಸಲು ತಿರ್ಮಾನಿಸಿದ್ದಾಗಿ ಅವರು ತಿಳಿಸಿದ್ದಾರೆ.

 

ಗ್ರಾಮಸ್ಥರ ತೀರ್ಮಾನದ ವಿರುದ್ದವಾಗಿ ನಡೆದು ಕೊಂಡು ಅಕ್ರಮ ಮದ್ಯ ಮಾರಾಟ ಮಾಡಿದವರಿಗೆ ಗ್ರಾಮದಿಂದ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಆಂದೋಲನ ವನ್ನು ಆರಂಭಿಸುವುದಾಗಿ ಎಚ್ಚರಿಕೆ  ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry