ಕಳ್ಳ ಎಂದು ಭಾವಿಸಿ ಹಲ್ಲೆ: ವಿದ್ಯಾರ್ಥಿ ಸಾವು

7

ಕಳ್ಳ ಎಂದು ಭಾವಿಸಿ ಹಲ್ಲೆ: ವಿದ್ಯಾರ್ಥಿ ಸಾವು

Published:
Updated:

ಪೂರ್ನಿಯಾ (ಪಿಟಿಐ): ಕಳ್ಳ ಎಂದು ಭಾವಿಸಿ ವ್ಯಕ್ತಿಗಳಿಬ್ಬರು ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯು ಸಾವನ್ನಪ್ಪಿರುವ ಘಟನೆ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯ ಬಲೂಟೊಲಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.ರೋಶನ್ ಕುಮಾರ್ ಮೃತಪಟ್ಟ ವಿಧ್ಯಾರ್ಥಿ. ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಭೀಮ್ ಮೆಹ್ತಾ ಮತ್ತು ಆತನ ಜತೆಯಿದ್ದ ವ್ಯಕ್ತಿಯೊಬ್ಬರು ಸೇರಿ ವಿದ್ಯಾರ್ಥಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.ಆತನನ್ನು ಹತ್ತಿರದ ಸರ್ದಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆಗೆ ವಿದ್ಯಾರ್ಥಿ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry