ಶುಕ್ರವಾರ, ಮೇ 27, 2022
21 °C

ಕವನದಲ್ಲಿ ಕೆಣಕಿದ ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಂತರಿಕ ಕಲಹದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ವಿಶ್ಲೇಷಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ತಮ್ಮ ಮಾತನ್ನು ಸಮರ್ಥಿಸುವ ಧಾಟಿಯಲ್ಲಿ ಕವನವೊಂದನ್ನು ವಾಚಿಸಿ ಗಮನ ಸೆಳೆದರು.ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಮುಖ್ಯಮಂತ್ರಿಯವರು ಬಸ್ ಚಾಲನೆ ಮಾಡು ತ್ತಿದ್ದಾರೆ. ಅವರ ಬಳಿ ಸ್ಟೀರಿಂಗ್, ಕ್ಲಚ್ ಮತ್ತು ಆಕ್ಸಿಲೇಟರ್ ಇದೆ. ಬಸ್ ಬಹಳ ವೇಗದಲ್ಲೇ ಓಡುತ್ತಿದೆ. ಆದರೆ, ಬ್ರೇಕ್ ಮಾತ್ರ ಶಾಸಕ ಡಿ.ಕೆ.ಶಿವಕುಮಾರ್ ಬಳಿ ಇದೆ. ಅವರು ಯಾವಾಗ ಬ್ರೇಕ್ ತುಳಿದು ಬಸ್ಸನ್ನು ಪ್ರಪಾತಕ್ಕೆ ಕೆಡವು ತ್ತಾರೋ ಎಂಬ ಭಯವಿದೆ' ಎಂದರು.ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡು ಬ್ರೇಕ್ ಮೇಲಿಂದ ಕಾಲು ತೆಗೆಸಿ ಎಂದು ಸಲಹೆ ನೀಡಿದ ಪೂಜಾರಿ, ಸರ್ಕಾರ ಬಿಕ್ಕಟ್ಟಿನಲ್ಲಿದೆ ಎಂಬರ್ಥದಲ್ಲಿ ಕವನ ವಾಚಿಸಿದರು. ಅವರು ವಾಚಿಸಿದ ಕವನ ಹೀಗಿದೆ...ಬಿರುಗಾಳಿ ಬೀಸುವುದು,

ತೆರೆ ಎದ್ದು ಕುಣಿಯುವುದು

ಹರಿಗೋಲು ಮುಳುಗುವುದು,

ಎಚ್ಚರ, ಎಚ್ಚರ

ಸಾತನೂರಿನ ಶಿವಕುಮಾರ,

ಕೊರಟಗೆರೆ ಪರಮೇಶ್ವರ,

ಮೌನ ವಹಿಸಿದ ಮೋಟಮ್ಮ,

ಮಾತನ್ನೇ ಮರೆತ ಮತ್ತಿಕಟ್ಟಿ,

ಸಮನ್ವಯದಲ್ಲಿ ಕಟ್ಟಿಹಾಕುವ

ಅಮ್ಮ ದೊಡ್ಡಮ್ಮ, ಸೋನಿಯಮ್ಮ

ಈ ಎಲ್ಲಾ ಕಂಡಾಗ

ಬಿರುಗಾಳಿ ಬೀಸುವುದು,

ತೆರೆ ಎದ್ದು ಕುಣಿಯುವುದು

ಕಾಂಗ್ರೆಸ್ ಹರಿಗೋಲು ಮುಳುಗುವುದು,

ಸಭಾ ನಾಯಕರೇ ಎಚ್ಚರ, ಎಚ್ಚರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.