ಕವನ ಸಂಕಲನ ಆಹ್ವಾನ

7

ಕವನ ಸಂಕಲನ ಆಹ್ವಾನ

Published:
Updated:

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯು ಯುವ ಕವಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನೀಡಲಿರುವ `ಕಣವಿ ಕಾವ್ಯ ಪುರಸ್ಕಾರ~ಕ್ಕೆ ಅರ್ಹ ಯುವ ಕವಿಗಳಿಂದ ಕವನ ಸಂಕಲನಗಳನ್ನು ಆಹ್ವಾನಿಸಿದೆ.ಪ್ರಶಸ್ತಿ ರೂ 5 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. 2011 ಮತ್ತು 2012ರಲ್ಲಿ ಪ್ರಕಟವಾದ, 40 ವರ್ಷ ವಯಸ್ಸಿನೊಳಗಿನ ಯುವಕವಿಗಳ ಮೊತ್ತ ಮೊದಲ ಕವನ ಸಂಕಲನಕ್ಕೆ ಈ ಪುರಸ್ಕಾರ ನೀಡಲಾಗುವುದು.

 

ಆಸಕ್ತರು ಕವನ ಸಂಕಲನದ ಮೂರು ಪ್ರತಿಗಳನ್ನು ಡಿಸೆಂಬರ್ 31ರ ಒಳಗೆ ವಿಜಯಕಾಂತ ಪಾಟೀಲ, ಪ್ರಧಾನ ಸಂಚಾಲಕ, ಕನ್ನಡ ಯುವಜನ ಕ್ರಿಯಾ ಸಮಿತಿ, ಚಿಕ್ಕಾಂಶಿ-ಹೊಸೂರು, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ- 581104 ಈ ವಿಳಾಸಕ್ಕೆ ತಲುಪಿಸಬೇಕು. ಮಾಹಿತಿಗೆ 97317 17430 ಸಂಪರ್ಕಿಸಬಹುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry