ಕವಿತೆ

7

ಕವಿತೆ

Published:
Updated:
ಕವಿತೆ

ಪ್ಯಾರಿಸ್ಸಿನ ಲಿಡೊ ಷೋನಲ್ಲಿಆಗಸದಿಂದ ಬಿಳಿಯರಳೆಯ ಮೋಡಗಳ

ನಡುವೆ ಕುಳಿತ ಷೋಡಶಿ

ರಾಗರತಿಯ ನೆರಳು ಬೆಳಕಿನ ಕಣ್ಣುಮುಚ್ಚಾಲೆಯಲ್ಲಿ

ಅವತರಿಸಿದಳು ಭುವಿಗೆ ವಿಮಾನದಲ್ಲಿ

ಮಂದಹಾಸ ಬೀರುತ್ತ ಹಿಗ್ಗಿನ ಬುಗ್ಗೆಯಾಗಿ

ಒಂದೊಂದೆ ವಸ್ತ್ರ ಕಳಚಿ ನಿಂತ

ಭುವನಸುಂದರಿಯ ಸುತ್ತಲೂ

ಎಪ್ಪತ್ತು ಸುರಕನ್ನಿಕೆಯರುಪೀಚುಮೊಲೆಯ ನೆರಿಗೆಗಟ್ಟದ, ಎಲ್ಲೂ ಮೂಳೆ ಕಾಣದ

ಸಪೂರ ಹೆಣ್ಣುಗಳ ಬರಿಮೈಯಲ್ಲಿ

ಮಾನಮುಚ್ಚಲು ಹೊಕ್ಕಳ ಕೆಳಗೊಂದು ತುಂಡುವಸ್ತ್ರ

ಉಕ್ಕಿಬಂದ ನವೋಲ್ಲಾಸದಲ್ಲಿ

ನಾಯಕಿಯೊಂದಿಗೆ ಹಾಡಿನ ಲಯ ಹಿಡಿದ

ಬಾಗು ಬಳುಕುಸುಖ ಸ್ಪರ್ಶದ ಆಮೋದ ನೋಡುಗರಲ್ಲಿ

ಬೆಂಗಳೂರಿನ ನೆಪೋಲಿಯ ಮಾದಕ ಕ್ಯಾಬರೆಯ ನೆನಪು.

ಬಟ್ಟೆ ಬಿಚ್ಚುತ್ತ ಹೋಗುವ ಹೆಣ್ಣಿನ ತುಂಬಿದ

ಮಾಂಸಖಂಡಗಳಲ್ಲಿ ನೋಟವಿಟ್ಟ

ಗಂಡಿನ ಧಮನಿ ಧಮನಿಗಳಲ್ಲಿ ಭರ‌್ರನೆಯ ರಕ್ತಸಂಚಾರ

ಸ್ಖಲಿತ ಚಿತ್ತ.ಇಲ್ಲಿ, ರಂಗಮಂಚದ ಮೇಲಿನ ಬತ್ತಲೆ ಹೆಣ್ಣುಗಳ

ನರ್ತನದಲ್ಲಿ ಹಿಗ್ಗು, ಸುಖೋನ್ಮಾದ

ಶಾಂಪೇನಿನ ಗುಟುಕಿನಲ್ಲಿ

ಬದುಕಿನ ಲೀಲೆ: ಅಡೈಸಲಾಗದ ಮಾಯೆ

`ಬತ್ತಲಾಗದೆ ಬಯಲು ಸಿಗದಣ್ಣ~

ಹೆಣ್ಣುಗಳ ರಾಸಲೀಲೆಯಲ್ಲಿಮಾತಿನಲ್ಲಿ ಹೇಳಲಾಗದ ಅತೀತ ಸುಖ

ಯೋಗಿಯ ಅಸ್ಖಲಿತ ಚಿತ್ತಸ್ಥಿತಿ,

`ಬಯಲು ಆಲಯದೊಳಗೊ

ಆಲಯದೊಳಗೆ ಬಯಲೊ~

ಬಿಡಿಸಲಾಗದ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry