ಕವಿತೆ: ಮನೆ ಎಂದರೆ ಮನಸ್ಸಿಗೆ ಬೇಸರ

ಶುಕ್ರವಾರ, ಜೂಲೈ 19, 2019
28 °C

ಕವಿತೆ: ಮನೆ ಎಂದರೆ ಮನಸ್ಸಿಗೆ ಬೇಸರ

Published:
Updated:

ಮನೆ ಎಂದರೆ ಮನಸ್ಸಿಗೆ ಬೇಸರ.

ಅದು ಕೊನೆಯದಾಗಿ ಮನೆ ಬಿಟ್ಟು ಹೋದವರ

ಅನುಕೂಲಕ್ಕೆ ಹೊಂದಿಕೊಂಡು

ಅವರನ್ನು ಮರಳಿ ಕರೆತರಲು ಹವಣಿಸುವಂತೆ

ಬಿಟ್ಟ ಹಾಗೆಯೇ ಉಳಿದಿರುತ್ತದೆ.

ಆದರೆ ಒಲಿಸಲು ಬೇರೆ ಯಾರೂ ಸಿಗದೆ,

ದೋಚಿಕೊಂಡು ಹೋದದ್ದನ್ನೆಲ್ಲ ಮರೆಯುವ

ಮನಸ್ಸಿಲ್ಲದೆ,

ಪ್ರತಿ ವಸ್ತುವನ್ನು ರೂಪಿಸುವ

ಆರಂಭದ ಹುಚ್ಚು ಹುಮ್ಮಸ್ಸನ್ನು ಕಳಚಿಕೊಂಡು

ಸೊರಗಿ ಬಡಕಲಾಗುತ್ತದೆ.

ಅದು ಹೇಗಿತ್ತು ನೋಡಲ್ಲ!

ಆ ಫೋಟೋಗಳನ್ನು ತೆಗೋ. ಕಪ್ಪು-ಬಶಿ-ಗ್ಲಾಸುಗಳ ಸೆಟ್ಟು.

ಹಾರ್ಮೋನಿಯಂ ಪೆಟ್ಟಿಗೆಯಲ್ಲಿ ಪದ್ಯಾವಲಿ.

ಆ ಹೂದಾನಿ.

(Philip Larkin®‡ ‘Home is So Sad’ ಪದ್ಯದ ಅನುವಾದ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry