ಭಾನುವಾರ, ಡಿಸೆಂಬರ್ 8, 2019
19 °C

ಕವಿ ಮಹಲಿಂಗರಂಗ ಮರತೇ ಹೋದರೆ?

ಮಲ್ಲೇಶ್ ಓ. ನಾಯಕನಹಟ್ಟಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿ ಮಹಲಿಂಗರಂಗ ಮರತೇ ಹೋದರೆ?

ದಾವಣಗೆರೆ: ಸಂಸ್ಕೃತ ಪ್ರಬಲ ಭಾಷೆಯಾಗಿದ್ದ ಕಾಲದಲ್ಲಿ ಸಂಸ್ಕೃತ ಪಂಡಿತರಿಗೆ ಸವಾಲು ಎಸೆದು ಕನ್ನಡದಲ್ಲಿ ಕಾವ್ಯ ರಚಿಸಿದ ಕವಿ `ಮಹಲಿಂಗರಂಗ~ ಅವರ ಸಮಾಧಿ- ಸ್ಮಾರಕ ನಿರ್ಲಕ್ಷ್ಯಕ್ಕೀಡಾಗಿದೆ.ಚಾಮರಸರ ಕಾಲದಲ್ಲಿ ಆಗಿನ ಬಳ್ಳಾರಿ ಜಿಲ್ಲೆಗೆ ಸೇರಿದ್ದ ಉಚ್ಚಂಗಿ ದುರ್ಗದಲ್ಲಿ ಜನಿಸಿದ ಕವಿ `ಮಹಲಿಂಗರಂಗ~ ನಂತರ ದಾವಣಗೆರೆಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು. ಭಾಷಾ ರಾಜಕಾರಣದಿಂದ ಬೇಸತ್ತ ಅವರು, ಕನ್ನಡದಲ್ಲಿ ಭಾಮಿನೀ ಷಟ್ಪದಿಯಲ್ಲಿ `ಅನುಭವಾಮೃತ~ ಕೃತಿ ರಚಿಸಿದ್ದರು.ಕೇವಲ ಪಂಡಿತರಿಗಷ್ಟೇ ಮೀಸಲೆಂಬಂತಿದ್ದ ಸಂಸ್ಕೃತದ ಉಪನಿಷತ್ತುಗಳನ್ನು ಅವರು ಕನ್ನಡೀಕರಿಸಿ ಪಾಮರರಿಗೂ ಅರ್ಥವಾಗುವಂತೆ ಮಾಡಿದ್ದರು. ಕನ್ನಡದ ಅಂತಹ ಮಹಾನ್ ಕವಿಯ ಸಮಾಧಿ ಇದೀಗ ಅಳಿವಿನಂಚಿಗೆ ತಲುಪಿದೆ.ಮಹಲಿಂಗರಂಗರ ಅನೇಕ ರಚನೆಗಳು ಈಗಲೂ ಸಿಕ್ಕಿಲ್ಲ. ಹಿರಿಯ ಸಾಹಿತಿ ಅರಾಸೇ ಅವರ ಪರಿಶ್ರಮದಿಂದಾಗಿ ಹೊರಬಂದ `ಅನುಭವಾಮೃತ~ ಕೃತಿ ನಂತರ ಮರು ಮುದ್ರಣ ಕಂಡಿರಲಿಲ್ಲ. ಆದರೆ, 2004ರಲ್ಲಿ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರು ಸಂಪಾದಿಸಿದ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್  ಮರು ಮುದ್ರಣ ಮಾಡಿಸಿತ್ತು.  ಸಾಹಿತ್ಯ ಸಂಶೋಧಕರಲ್ಲಿ `ಮಹಲಿಂಗರಂಗ~ರ ಜನ್ಮಸ್ಥಳದ ಬಗ್ಗೆ ಜಿಜ್ಞಾಸೆ ಇದೆ.ಭಕ್ತರೊಬ್ಬರು ಮಹಲಿಂಗರಂಗ ಸಮಾಧಿಗೆ ನಿತ್ಯ ಪೂಜೆ ಮಾಡುತ್ತಾ ಬರುತ್ತಿರುವುದರಿಂದ ಅದಿನ್ನೂ ಉಳಿದುಕೊಂಡು ಬಂದಿದೆ. ನಗರದ ಗೌರಮ್ಮ ಪಿ. ರಾಮರಾವ್ ಟ್ರಸ್ಟ್ ಮಹಲಿಂಗರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಅವರ ನೆನಪು ಉಳಿಸುವ ಕಾರ್ಯ ಮಾಡುತ್ತಿದೆ.

ಪ್ರತಿಕ್ರಿಯಿಸಿ (+)