ಕಶ್ಯಪ್‌ಗೆ 14ನೇ ಸ್ಥಾನ

7
ಬ್ಯಾಡ್ಮಿಂಟನ್ ರ‌್ಯಾಂಕಿಂಗ್

ಕಶ್ಯಪ್‌ಗೆ 14ನೇ ಸ್ಥಾನ

Published:
Updated:

ನವದೆಹಲಿ (ಪಿಟಿಐ): ಪಿ. ಕಶ್ಯಪ್ ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ನೂತನ ರ‌್ಯಾಂಕಿಂಗ್ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದ್ದಾರೆ. ಭಾರತದ ಆಟಗಾರ ವೃತ್ತಿಜೀವನದಲ್ಲಿ ಪಡೆದ ಅತ್ಯುತ್ತಮ ಸ್ಥಾನ ಇದಾಗಿದೆ.ಇತ್ತೀಚೆಗೆ ನಡೆದ ಸಯ್ಯದ್ ಮೋದಿ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದ ಕಾರಣ ಕಶ್ಯಪ್ ಆರು ಸ್ಥಾನಗಳಷ್ಟು ಮೇಲಕ್ಕೇರಿದರು. ಈ ಹಿಂದಿನ ಪಟ್ಟಿಯಲ್ಲಿ ಅವರು 20ನೇ ಸ್ಥಾನದಲ್ಲಿದ್ದರು.ಮಹಿಳೆಯರ ವಿಭಾಗದ ರ‌್ಯಾಂಕಿಂಗ್‌ನಲ್ಲಿ ಪಿ.ವಿ. ಸಿಂಧು ಐದು ಕ್ರಮಾಂಕ ಮೇಲಕ್ಕೇರಿ 19ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ರ‌್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆಟಗಾರ್ತಿಯ ಅತ್ಯುನ್ನತ ಸಾಧನೆ ಇದು. ಸಯ್ಯದ್ ಮೋದಿ ಟೂರ್ನಿಯಲ್ಲಿ ಸಿಂಧು `ರನ್ನರ್ ಅಪ್' ಸ್ಥಾನ ಪಡೆದಿದ್ದರು.ಸೈನಾ ನೆಹ್ವಾಲ್ ಮೂರನೇ ಸ್ಥಾನದೊಂದಿಗೆ ಪ್ರಸಕ್ತ ಋತುವನ್ನು ಕೊನೆಗೊಳಿಸಲಿದ್ದಾರೆ. ಚೀನಾದ ಲಿ ಕ್ಸುರುಯ್ ಮತ್ತು ಯಿಹಾನ್ ವಾಂಗ್ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಪುರುಷರ ವಿಭಾಗದ ರ‌್ಯಾಂಕಿಂಗ್‌ನಲ್ಲಿ ಮಲೇಷ್ಯದ ಲೀ ಚೊಂಗ್ ವಿ ಅಗ್ರಸ್ಥಾನದಲ್ಲಿದ್ದರೆ, ಚೀನಾದ ಚೆನ್ ಲಾಂಗ್ ಬಳಿಕದ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry